ಮಧ್ಯಪ್ರದೇಶ: ಮತಾಂತರ ನಿಷೇಧ ಕಾಯ್ದೆಯು ‘ಘರ್ ವಾಪ್ಸಿ’ಗೆ ಅನ್ವಯಿಸುವುದಿಲ್ಲ

Update: 2020-12-27 07:57 GMT

ಭೋಪಾಲ್,ಡಿ.27: ಉತ್ತರಪ್ರದೇಶದಲ್ಲಿ ಬಲವಂತದ ಮತಾಂತರ ನಿಷೇಧ ಕಾಯ್ದೆಯು ಜಾರಿಯಾದ ಬಳಿಕ ಮಧ್ಯಪ್ರದೇಶದಲ್ಲೂ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರನ್ನು ಆಮಿಷವೊಡ್ಡಿ, ಬಲವಂತದಿಂದ ಅಥವಾ ವಿವಾಹದ ಮೂಲಕ ಮತಾಂತರ ಮಾಡುವಂತಿಲ್ಲ. ಆದರೆ ತನ್ನ ಮೂಲ ಧರ್ಮಕ್ಕೆ ಮತಾಂತರವಾಗುವುದು ತಪ್ಪಲ್ಲ ಮತ್ತು ಶಿಕ್ಷಾರ್ಹವಲ್ಲ ಎಂದು ಈ ಕಾಯ್ದೆಯು ಪ್ರತಿಪಾದಿಸುತ್ತದೆ ಎಂದು hindustantimes.com ವರದಿ ಮಾಡಿದೆ .

ಮಧ್ಯಪ್ರದೇಶದಲ್ಲಿ ಜಾರಿಗೆ ತಂದಿರುವ ಧಾರ್ಮಿಕ್ ಸ್ವಾತಂತ್ರ್ಯತಾ ಬಿಲ್ 2020 ಪ್ರಕಾರ “ಪಿತೃಧರ್ಮಕ್ಕೆ ಮರಳಿ ಮತಾಂತರವಾಗುವುದನ್ನು ಮತಾಂತರ ಎಂದು ಪರಿಗಣಿಸಲಾಗುವುದಿಲ್ಲ. ಹುಟ್ಟಿನ ಸಮಯದಲ್ಲಿ ತಂದೆಯ ಧರ್ಮವು ಯಾವುದಾಗಿತ್ತೋ, ಅದೇ ಧರ್ಮಕ್ಕೆ ಮರಳಿ ಸೇರ್ಪಡೆಗೊಂಡರೆ ಅದು ಶಿಕ್ಷಾರ್ಹ ಅಪರಾಧವೇನೂ ಅಲ್ಲ ಎಂದು ಬಿಲ್ ತಿಳಿಸಿದ್ದಾಗಿ hindustantimes.com ವರದಿ ಮಾಡಿದೆ.

ಈ ಕುರಿತಾದಂತೆ ಮಾತನಾಡಿದ ಮಧ್ಯಪ್ರದೇಶ ಗೃಹ ಸಚಿವ ನಿರೋತ್ತಮ್ ಮಿಶ್ರಾ, ಮರಳಿ ಪಿತೃ ಧರ್ಮಕ್ಕೆ ಆಗಮಿಸುವುದನ್ನು ನಾವು ಮತಾಂತರ ಎನ್ನಲು ಸಾಧ್ಯವಿಲ್ಲ. ಅದು ಜ್ಞಾನೋದಯವೇ ಹೊರತು ಕ್ರಿಮಿನಲ್ ಅಪರಾಧವೇನೂ ಅಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿಭಿನ್ನ ಧರ್ಮದವು ಪರಸ್ಪರ ಮದುವೆಯಾದರೆ ಅವರಿಗೆ ಪಿತ್ರಾರ್ಜಿತ ಆಸ್ತಿಯನ್ನೂ ನೀಡುವಂತಿಲ್ಲ ಎಂದೂ ಈ ಕಾನೂನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News