ಪುತ್ತೂರು: ಮತಗಟ್ಟೆ ವಠಾರದಲ್ಲಿ ಪತ್ತೆಯಾದ ಅಭ್ಯರ್ಥಿಗಳ ಚಿಹ್ನೆಯ ಪತ್ರ
Update: 2020-12-27 12:07 IST
ಪುತ್ತೂರು, ಡಿ.27: ಪುತ್ತೂರು ಹಂಟ್ಯಾರು ಶಾಲಾ ಮತಗಟ್ಟೆಯ ವಠಾರದಲ್ಲಿ ಅಭ್ಯರ್ಥಿಗಳ ಚಿಹ್ನೆಯ ಪತ್ರ ಹಂಚುತ್ತಿರುವುದು ಪತ್ತೆಯಾಗಿದೆ.
ಗ್ರಾಪಂ ಚುನಾವಣೆಯ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲನೆ ಮಾಡಲೆಂದು ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಅವರು ಮತಗಟ್ಟೆಯಲ್ಲಿ ಮತದಾರನ ಕೈಯಲ್ಲಿರುವ ಚೀಟಿಯನ್ನು ನೋಡಿ ವಿಚಾರಿಸಿದಾಗ ಇದು ಬೆಳಕಿಗೆ ಬಂದಿದೆ.
ಚೀಟಿಯ ಬಗ್ಗೆ ವಿಚಾರಿಸಿದಾಗ ಮತದಾರ ನೀಡಿದ ಮಾಹಿತಿಯಂತೆ ತಕ್ಷಣ ಅಲ್ಲಿಗೆ ಧಾವಿಸಿದ ಡಾ|ಯತೀಶ್ ಉಳ್ಳಾಲ್ ಬೂತ್ ನಲ್ಲಿ ಟೇಬಲ್ ಹಾಕಿ ಕೂತಿದ್ದವರನ್ನು ವಿಚಾರಿಸಿದಲ್ಲದೆ ಟೇಬಲ್ ಕೆಳಗೆ ಇದ್ದ ಅಭ್ಯರ್ಥಿಗಳ ಚಿಹ್ನೆ ಇದ್ದ ಚೀಟಿನ ಒಂದು ಕಟ್ಟನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಇದೆ ವೇಳೆ ಅಭ್ಯರ್ಥಿಯೋರ್ವ ಮತದಾರರಿಗೆ ಚೀಟಿ ಕೊಡುತ್ತಿರುವುದನ್ನು ಸಹ ಸಹಾಯಕ ಕಮಿಶನರ್ ಪತ್ತೆ ಮಾಡಿದ್ದಾರೆ.