ಆಸ್ಪತ್ರೆಯಿಂದ ಬಿಡುಗಡೆಗೊಂಡ ಸೂಪರ್ ಸ್ಟಾರ್ ರಜನಿಕಾಂತ್

Update: 2020-12-27 10:49 GMT

ಹೈದರಾಬಾದ್,ಡಿ.27: ರಕ್ತದೊತ್ತಡ ಹೆಚ್ಚಳದಿಂದಾಗಿ ಹೈದರಾಬಾದ್ ನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ರಕ್ತದೊತ್ತಡ ಪ್ರಮಾಣವು ಸಮರ್ಪಕವಾದ ಬಳಿಕ ಹಾಗೂ ಯಾವುದೇ ತೊಂದರೆಯಿಲ್ಲ ಎಂದು ಕಂಡು ಬಂದ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಪೋಲೊ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆಂದು ndtv.com ವರದಿ ಮಾಡಿದೆ.

ಅನ್ನಾತೆ ಚಿತ್ರದ ಚಿತ್ರೀಕರಣದ ವೇಳೆ ತಂಡದಲ್ಲಿದ್ದ ನಾಲ್ವರಲ್ಲಿ ಕೊರೋನ ಪಾಸಿಟಿವ್ ಕಂಡು ಬಂದಿತ್ತು. ಬಳಿಕ ಚಿತ್ರೀಕರಣವನ್ನು ರದ್ದುಗೊಳಿಸಲಾಗಿತ್ತು. ಈ ನಡುವೆ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿದ್ದು ಎಲ್ಲರಲ್ಲೂ ಭೀತಿ ಮೂಡಿಸಿತ್ತು. ಆದರೆ ಅವರ ಕೊರೋನ ಪರೀಕ್ಷೆಯು ನೆಗೆಟಿವ್ ಆಗಿದ್ದು, ರಕ್ತದೊತ್ತಡದಲ್ಲಿ ಮಾತ್ರ ಒಂದಿಷ್ಟು ಏರುಪೇರಾಗಿದೆ ಎಂದು ವೈದ್ಯರು ತಿಳಿಸಿದ್ದರು.

“ಸದ್ಯ ರಜನಿಕಾಂತ್ ರವರು ಆರೋಗ್ಯವಾಗಿದ್ದಾರೆ. ಅವರ ರಕ್ತದೊತ್ತಡದ ಪ್ರಮಾಣವು ಸ್ಥಿರವಾಗಿದೆ. ಆದ್ದರಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಿದ್ದೇವೆ ಎಂದು ಅಪೋಲೊ ಆಸ್ಪತ್ರೆ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News