ಪ್ರತಿಭಟನಾನಿರತ ರೈತರನ್ನು ‘ಅರ್ಬನ್ ನಕ್ಸಲ್’ಗಳೆಂದ ಬಿಜೆಪಿ ವಿರುದ್ಧ ಕಿಡಿಕಾರಿದ ಪಂಜಾಬ್ ಸಿಎಂ

Update: 2020-12-27 12:25 GMT

ಹೊಸದಿಲ್ಲಿ,ಡಿ.27: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಯ ವಿರುದ್ಧ ಕಳೆದ ಒಂದು ತಿಂಗಳಿನಿಂದೀಚೆಗೆ ಪ್ರತಿಭಟಿಸುತ್ತಿರುವ ರೈತರ ಕುರಿತು ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚಗ್ ಅರ್ಬನ್ ನಕ್ಸಲ್ ಗಳು ಎಂದು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಪ್ರತಿಕ್ರಿಯಿಸಿದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಇದೊಂದು ಮೂರ್ಖತನದ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ, “ಬಿಜೆಪಿ ಪಕ್ಷದ ಹಿರಿಯ ನಾಯಕರೋರ್ವರು ಪ್ರತಿಭಟಿಸುತ್ತಿರುವ ರೈತರನ್ನು ಅರ್ಬನ್ ನಕ್ಸಲ್ ಗಳು ಎಂದು ಕರೆದಿರುವ ಕುರಿತು ಇಂದಿನ ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ೀ ಹೇಳಿಕೆಯು ಮೂರ್ಖತನದ್ದಾಗಿದೆ. ಈ ಕಾಯ್ದೆಯು ದಿಲ್ಲಿಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಭಾವಿಸಿದ್ದಾರಾ?”

“ನಾವು ಯಾವತ್ತೂ ಶಾಂತಿಗೆ ಪ್ರಾಮುಖ್ಯತೆ ನೀಡಿದ್ದೇವೆ. ಶಾಂತಿಯುತ ಪ್ರತಿಭಟನೆಯ್ನೂ ನಡೆಸಿದ್ದೇವೆ. ನೀವು ಕೆಟ್ಟ ಕಾಯ್ದೆಗಳನ್ನು ಜನರ ಮೇಲೆ ಹೇರಿ, ಪಂಜಾಬ್ ಸರಕಾರವನ್ನೋ, ಪೊಲೀಸರನ್ನೋ ತೆಗಳಿ ಪ್ರಯೋಜನವಿಲ್ಲ” ಎಂದು ಅವರು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

“ಪಂಜಾಬ್ ನಲ್ಲಿ ಕಾನೂನು ಸುವ್ಯವಸ್ಥೆಯನ್ನುಕಾಪಾಡಲು ಅಮರೀಂದರ್ ಸಿಂಗ್ ಸರಕಾರವು ವಿಫಲವಾಗಿದೆ. ಪಂಜಾಬ್ ನಲ್ಲಿ ಅರ್ಬನ್ ನಕ್ಸಲ್ ಗಳು ಕೂಡಾ ಕಣಕ್ಕಿಳಿದಿದ್ದಾರೆ. ಅಲ್ಲಿನ ನ್ಯಾಯ ವ್ಯವಸ್ಥೆಹದಗೆಡಲು ಈ ಅರ್ಬನ್ ನಕ್ಸಲ್ ಗಳೇ ಕಾರಣ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News