ಆರು ತಿಂಗಳ ಕನಿಷ್ಠ ಮಟ್ಟಕ್ಕಿಳಿದ ಹೊಸ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ

Update: 2020-12-27 14:30 GMT

ಹೊಸದಿಲ್ಲಿ, ಡಿ.27: ರವಿವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 18,732 ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು,ಇದು ಕಳೆದ ಸುಮಾರು ಆರು ತಿಂಗಳುಗಳಲ್ಲಿ ಕನಿಷ್ಠ ಸಂಖ್ಯೆಯಾಗಿದೆ. ಈವರೆಗೆ 97,61,538 ಜನರು ಸೋಂಕಿನಿಂದ ಗುಣಮುಖ ರಾಗಿದ್ದು,ರಾಷ್ಟ್ರೀಯ ಚೇತರಿಕೆ ದರವು ಶೇ.95.82ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಈ ಅವಧಿಯಲ್ಲಿ ದೇಶದಲ್ಲಿ ಕೊರೋನ ವೈರಸ್ ಸೋಂಕಿನಿಂದ 279 ಜನರು ಮೃತಪಟ್ಟಿದ್ದು,ಇದರೊಂದಿಗೆ ಒಟ್ಟು ಸಾವುಗಳ ಸಂಖ್ಯೆ 1,47,622ಕ್ಕೇರಿದೆ. ಸದ್ಯ ಕೋವಿಡ್-19 ಮರಣ ದರ ಶೇ.1.44ರಷ್ಟಿದೆ.

ಕೊನೆಯ ಬಾರಿ ಜು.1ರಂದು ದೈನಂದಿನ ಹೊಸ ಪ್ರಕರಣಗಳಲ್ಲಿ ಇಳಿಕೆ ದಾಖಲಾಗಿತ್ತು. ಅಂದು 18,653 ಹೊಸ ಪ್ರಕರಣಗಳು ವರದಿಯಾಗಿದ್ದವು.

ದೇಶದಲ್ಲೀಗ 2,78,690 ಸಕ್ರಿಯ ಪ್ರಕರಣಗಳಿದ್ದು,ಇದು ಈವರೆಗೆ ದಾಖಲಾದ ಒಟ್ಟು ಪ್ರಕರಣಗಳ ಶೇ.2.73ರಷ್ಟಾಗಿದೆ.

ಡಿ.26ರವರೆಗೆ ಒಟ್ಟು 16,81,02,657 ಸ್ಯಾಂಪಲ್‌ಗಳನ್ನು ಕೊರೋನ ವೈರಸ್ ಪರೀಕ್ಷೆಗೊಳಪಡಿಸಲಾಗಿದ್ದು,ಶನಿವಾರ 9,43,368 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಯು ತಿಳಿಸಿದೆ.

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಆ.7ರಂದು 20 ಲಕ್ಷದ ಗಡಿಯನ್ನು ದಾಟಿದ್ದು,ಕ್ರಮೇಣ ಹೆಚ್ಚುತ್ತ ನ.20ರಂದು 90 ಲಕ್ಷದ ಗಡಿಯನ್ನು ದಾಟಿತ್ತು. ಶನಿವಾರ ಬೆಳಿಗ್ಗೆಯಿಂದೀಚಿಗೆ ವರದಿಯಾಗಿರುವ 279 ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿಯ 60, ದಿಲ್ಲಿಯ 23, ಪ.ಬಂಗಾಳದಲ್ಲಿಯ 33, ಕೇರಳದಲ್ಲಿಯ 21,ಉತ್ತರ ಪ್ರದೇಶದಲ್ಲಿ 14,ಉತ್ತರಾಖಂಡದಲ್ಲಿಯ 13 ಹಾಗೂ ಪಂಜಾಬ್ ಮತ್ತು ಛತ್ತೀಸ್‌ಗಡಗಳಲ್ಲಿಯ ತಲಾ 12 ಸಾವುಗಳು ಸೇರಿವೆ.

ಮಹಾರಾಷ್ಟ್ರದಲ್ಲಿ 49,189,ಕರ್ನಾಟಕದಲ್ಲಿ 12,501, ತಮಿಳುನಾಡಿನಲ್ಲಿ 12,059,ದಿಲ್ಲಿಯಲ್ಲಿ 10,437, ಪ.ಬಂಗಾಳದಲ್ಲಿ 9,569,ಉತ್ತರ ಪ್ರದೇಶದಲ್ಲಿ 8,293, ಆಂಧ್ರಪ್ರದೇಶದಲ್ಲಿ 7,092,ಪಂಜಾಬಿನಲ್ಲಿ 5,281 ಮತ್ತು ಗುಜರಾತ್‌ನಲ್ಲಿ 4,275 ಸಾವುಗಳು ಸೇರಿದಂತೆ ದೇಶದಲ್ಲಿ ಈವರೆಗೆ ಒಟ್ಟು 1,47,622 ಜನರು ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ.

ಶೇ.70ಕ್ಕೂ ಹೆಚ್ಚಿನ ಸಾವುಗಳು ಸಹ ಅನಾರೋಗ್ಯಗಳಿಂದಾಗಿ ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯವು ಒತ್ತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News