ಹೊಸ ಅವತಾರದಲ್ಲಿ ಪ್ರಧಾನಿ ಮೋದಿ: ಸಾಮಾಜಿಕ ತಾಣದಲ್ಲಿ ವ್ಯಂಗ್ಯಗಳ ಸುರಿಮಳೆ
ಹೊಸದಿಲ್ಲಿ,ಡಿ.27: ಶನಿವಾರದಂದು ಜಮ್ಮು ಕಾಶ್ಮೀರದ ಜನರನ್ನುದ್ದೇಶಿಸಿ ಮಾತನಾಡುವ ಪ್ರಧಾನಿ ಧರಿಸಿದ್ದ ವಸ್ತ್ರ ಮತ್ತು ವಸ್ತ್ರಧಾರಣಾ ಶೈಲಿಯು ಸದ್ಯ ಸಾಮಾಜಿಕ ತಾಣದಾದ್ಯಂತ ವ್ಯಂಗ್ಯಕ್ಕೊಳಗಾಗಿದೆ. ಈ ಹಿಂದೆ ನವಿಲು, ಬಾತುಕೋಳಿ ಮತ್ತು ಪುಸ್ತಕ ಹಿಡಿದು ಮಾಡಿದಿದ್ದ ಪೋಟೊ ಶೂಟ್ ವ್ಯಾಪಕ ಟೀಕೆಗೆ ಒಳಗಾಗಿತ್ತು.
“ನನ್ನ ಜಮ್ಮುಕಾಶ್ಮೀರದ ಸಹೋದರರನ್ನು ಮಾತನಾಡಿಸಲು ತೆರಳುತ್ತಿದ್ದೇನೆ ಎಂದು ಪ್ರಧಾನಿ ಮೋದಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ನೂತನ ಶೈಲಿಯ ಫೋಟೊವನ್ನು ಹಂಚಿಕೊಂಡಿದ್ದರು. ಒಂದೆಡೆ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಪ್ರಧಾನಿ ಮಾತ್ರ ವಿಶೇಷ ಶೈಲಿಯ ವಸ್ತ್ರಗಳನ್ನು ಧರಿಸಿ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ತಾಣದಾದ್ಯಂತ ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
“ದೇಶವು ಈ ರೀತಿಯಲ್ಲಿ ಕಷ್ಟಪಡುತ್ತಿರುವಾಗ ನೀವು ಮಾತ್ರ ಯಾವುದರ ಪರಿವೆಯೇ ಇಲ್ಲದೇ ಥರಥರದ ಫೋಟೊಗಳನ್ನು ಪ್ರಕಟಿಸುತ್ತಿದ್ದೀರಿ. ನಿಮ್ಮ ಫೋಟೊಗ್ರಾಫರ್ ಯಾರೆಂದು ತಿಳಿಯಬೇಕಾಗಿದೆ “, “4ಜಿ ನೆಟ್ ವರ್ಕ್ ಇಲ್ಲದ ನಿಮ್ಮ ಕಾಶ್ಮೀರದ ಸಹೋದರರು ನೀವು ಮಾತನಾಡುವುದನ್ನು ನೋಡುವುದು, ಕೇಳಿಸಿಕೊಳ್ಳುವುದು ಹೇಗೆ?, ಪಶ್ಚಿಮ ಬಂಗಾಳದ ಚುನಾವಣೆಗಾಗಿ ನೀವು ರವೀಂದ್ರನಾಥ್ ಟ್ಯಾಗೋರ್ ರನ್ನು ಅನುಕರಿಸಿ ನಾಟಕವಾಡುತ್ತಿದ್ದೀರಿ ಎಂದು ಹಲವು ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,
“ನಿಮ್ಮ ಫೋಟೊಗ್ರಾಪರ್, ನಿಮ್ಮ ಹೇರ್ ಸ್ಟೈಲಿಸ್ಟ್, ನಿಮ್ಮ ಮೇಕಪ್ ಮ್ಯಾನ್, ಎಲ್ಲರೂ ತುಂಬಾ ಪ್ರತಿಭಾವಂತರು. ನೀವು ಈ ದೇಶದ ಅತ್ಯುತ್ತಮ ಮಾಡೆಲ್ ಗಳಲ್ಲೊಬ್ಬರು ಎಂದು ಕಟಕಿಯಾಡಿದ್ದಾರೆ.
ಇನ್ನು ಕೆಲವು ಕಮೆಂಟ್ ಗಳು ಈ ಕೆಳಗಿನಂತಿವೆ…