ಕೊಲ್ಲರಕೋಡಿ: ವಿವಾಹದ ಪ್ರಯುಕ್ತ ರಕ್ತದಾನ ಶಿಬಿರ
Update: 2020-12-27 20:18 IST
ಕೊಲ್ಲರಕೋಡಿ, ಡಿ.27: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ನರಿಂಗಾನ (ಕಾಸ್ಕ್), ಬ್ಲಡ್ ಡೋನರ್ಸ್ ಮಂಗಳೂರು (ರಿ) ಹಾಗೂ ರೆಡ್ ಕ್ರಾಸ್ ಮಂಗಳೂರು ಇದರ ಸಹಯೋಗದೊಂದಿಗೆ ಕಾಸ್ಕ್ ನರಿಂಗಾನ ಇದರ ಸದಸ್ಯರಾದ ನಿಝಾಮುದ್ದೀನ್ ಎಂ.ಜಿ ಅವರ ವಿವಾಹದ ಪ್ರಯುಕ್ತ ರಕ್ತದಾನ ಶಿಬಿರವು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ಬ್ಲಡ್ ಡೋನರ್ಸ್ ಮಂಗಳೂರು ಪ್ರಧಾನ ಕಾರ್ಯದರ್ಶಿ ನವಾಝ್ ಎಂ.ಬಿ, ಕಾಸ್ಕ್ ನರಿಂಗಾನ ಅಧ್ಯಕ್ಷ ಸಲಾಂ ಎಂ.ಎಚ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.