ಮಾನವ ಸಮನ್ವಯ ಸಾಹಿತ್ಯ ಪರಿಷತ್‌ನಿಂದ ‘ಭಾರತ ಮತ್ತು ವಿವಿಧ ಸಮುದಾಯಗಳು’ ಕುರಿತು ವಿಚಾರಗೋಷ್ಠಿ
ಮಂಗಳೂರು, ಡಿ.27: ವಿಭಿನ್ನ ಸಂಸ್ಕೃತಿಗಳ ತವರೂರಾಗಿರುವ ಭಾರತದಲ್ಲಿ ಪುರಾತನ ಕಾಲದಿಂದಲೂ ಶಾಂತಿಪ್ರಿಯ ಭಾರತೀಯ ನಾಗರಿಕರು ಮಾನವೀಯ ಮೌಲ್ಯಗಳನ್ನು ಜತನದಿಂದ ಕಾಪಾಡಿಕೊಂಡು ಬಂದ ಕಾರಣ ಭಾರತದಲ್ಲಿ ಸೌಹಾರ್ದ ಪರಂಪರೆ ಹಚ್ಚ ಹಸಿರಾಗಿದೆ ಎಂದು ಕವಿ ಹಮೀದ್ ಹಸನ್ ಮಾಡೂರು ಹೇಳಿದ್ದಾರೆ.
ಮಾನವ ಸಮನ್ವಯ ಸಾಹಿತ್ಯ ಪರಿಷತ್ ವತಿಯಿಂದ ರವಿವಾರ ಆನ್‌ಲೈನ್‌ನಲ್ಲಿ ನಡೆದ ‘ಭಾರತ ಮತ್ತು ವಿವಿಧ ಸಮುದಾಯಗಳು’ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸಂಘಟನಾ ಕಾರ್ಯದರ್ಶಿ ದಿಲೀಪ್ ಕಡಬ ಅಧ್ಯಕ್ಷತೆ ವಹಿಸಿದ್ದರು.
ಯುವ ಲೇಖಕ ಬಿ.ಎಸ್.ಇಸ್ಮಾಯಿಲ್ ಕುತ್ತಾರ್, ನಿವೃತ್ತ ಅಧ್ಯಾಪಕ ನಾರಾಯಣ ರೈ ಕುಕ್ಕುವಳ್ಳಿ, ಮಾನವರು ಸಹೋದರರು ಸೌಹಾರ್ದ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ಸುಳ್ಯ, ಸಾಹಿತಿ ಪ್ರೀತಿ ಭರತ್ ಬೆಂಗಳೂರು, ಪತ್ರಕರ್ತ ಬಶೀರ್ ಕಲ್ಕಟ್ಟ, ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾತಿಷ ಅಳಕೆಮಜಲು ಮಾತನಾಡಿದರು.
ಅಪೂರ್ವ ಸಾಧಕ ಪ್ರಶಾಂತ್ ಚೌಕದಪಾಲು, ಅಬ್ದುಲ್ ರಹ್ಮಾನ್ ಝುಹ್‌ರಿ ಎಂ.ಕುಂಬ್ರ, ಪುಣಚ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್‌ನ ಪ್ರಧಾನ ಕಾರ್ಯದರ್ಶಿ ಎ. ಮುಹಮ್ಮದ್ ಹನೀಫ್ ಆಲಂತಡ್ಕ ಪುಣಚ,ಯುವ ಸಾಹಿತಿ ಐ.ಕೆ.ಇಕ್ಬಾಲ್ ಮದನಿ ಕುಕ್ಕೊಟು, ಲತೀಫ್ ಪುಣಚ ಅತಿಥಿಗಳಾಗಿದ್ದರು.
ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆಯ ದ.ಕ.ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಿ.ಎ.ಅಬ್ಬಾಸ್ ಪಡಿಕ್ಕಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಂಗಳ ಕಲಾ ಸಾಹಿತ್ಯ ವೇದಿಕೆಯ ದ.ಕ.ಜಿಲ್ಲಾಧ್ಯಕ್ಷ ಎ.ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ ದರು. ಅನಿವಾಸಿ ಭಾರತೀಯ ಅಬ್ದುರ್ರಹ್ಮಾನ್ ತುಂಬೆ ವಂದಿಸಿದರು. ದ.ಕ.ಜಿಲ್ಲಾ ಮಾನವರು ಸಹೋದರರು ಸೌಹಾರ್ದ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.