×
Ad

ಕಲ್ಲಡ್ಕ : 'ಸುಂದರ ಸಮಾಜಕ್ಕಾಗಿ ಯುವಕರ ಪಾತ್ರ' ವಿಶೇಷ ತರಗತಿ

Update: 2020-12-27 22:27 IST

ಕಲ್ಲಡ್ಕ : ನಿದ್ರೆ ಬಂದಾಗ ಕನಸು ಕಾಣುವುದಕ್ಕಿಂತ ನಿದ್ರೆ ಮಾಡದೆ ಇರುವ ಸಮಯ ಕನಸು ಕಂಡಲ್ಲಿ ಆ ಕನಸಿಗೆ ಅರ್ಥ ಇದೆ ಎಂದು ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್  ತ್ವಬೀಬ್ ಶೇಖ್ ಮುಹಮ್ಮದ್ ಇರ್ಫಾನಿ ಫೈಝಿ ಅಲ್ ಅಝ್ಹರಿ ಅಭಿಪ್ರಾಯಪಟ್ಟರು.

ಅವರು ಕಲ್ಲಡ್ಕ ಜಮಾಅತ್ ಕಮಿಟಿ ಸಂಘಟಿಸಿದ 'ಸುಂದರ ಸಮಾಜಕ್ಕಾಗಿ ಯುವಕರ ಪಾತ್ರ' ಎಂಬ  ವಿಶೇಷ ತರಗತಿಯಲ್ಲಿ ಮಾತಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷರಾದ ಹಾಜಿ ಮುಹಮ್ಮದ್  ಮಾತನಾಡಿ, ಯುವ ಸಮೂಹ ಸತ್ಯ ಭೋದನೆಗೆ, ಸತ್ಯ ಮಾತಿಗೆ ಗಮನ ಹರಿಸಿದೇ ಇದ್ದಲ್ಲಿ ದುರಂತ ಕಟ್ಟಿಟ್ಟ ಬುತ್ತಿ ಎಂದು ಯುವಕರಿಗೆ ಹೆಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ    ಅಬೂಬಕರ್ ಸಾಹೇಬ್ ಉಪಸ್ಥಿತರಿದ್ದರು. ಅಬ್ದುಲ್ ಹಮೀದ್ ಗೋಳ್ತಮಜಲ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News