×
Ad

ಉಡುಪಿ: ಜೇನು ನೊಣ ದಾಳಿ; ಬಾಲಕ ಅಸ್ವಸ್ಥ

Update: 2020-12-29 11:27 IST

ಉಡುಪಿ, ಡಿ.29: ಜೇನು ನೊಣ ಕಚ್ಚಿದ ಪರಿಣಾಮ‌ ಬಾಲಕನೋರ್ವ ಅಸ್ವಸ್ಥಗೊಂಡ ಘಟನೆ ಇಂದು ಬೆಳಗ್ಗೆ ನಗರದ ಚಿಟ್ಪಾಡಿ ಸಮೀಪ ನಡೆದಿದೆ.

 ಬಾಗಲಕೋಟೆ ಮೂಲದ ಪುಂಡಲೀಕ ಅಸ್ವಸ್ಥಗೊಂಡ ಬಾಲಕ. ಗುಂಪು ಗುಂಪಾಗಿ ಬಂದ ಜೇನು ನೊಣಗಳು ಅವರ ಮೇಲೆ ದಾಳಿ ನಡೆಸಿದೆ. ಬಳಿಕ ಅವರನ್ನು ರಕ್ಷಿಸಿರುವ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುಂಡಲೀಕ ಪ್ರಥಮ ಪಿಯುಸಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News