ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ : ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
ಉಡುಪಿ, ಡಿ.29: ವಲಯವಾರು ನೀರು ಸರಬರಾಜು ಮಾಡುತ್ತಿದ್ದರೂ ನಗರದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿರುವ ಬಗ್ಗೆ ಸದಸ್ಯರು ಇಂದು ನಡೆದ ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಗಿರೀಶ್ ಅಂಚನ್, ವಲಯವಾರು ನೀರು ಪೂರೈಕೆ ಮಾಡುತ್ತಿದ್ದರೂ ನಗರಸಭೆಯ 35 ವಾರ್ಡ್‌ಗಳ ಕೆಲವು ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಅಮೃತಾ ಕೃಷ್ಣಮೂರ್ತಿ, ರಮೇಶ್ ಕಾಂಚನ್, ವಿಜಯಲಕ್ಷ್ಮೀ, ಸೆಲಿನಾ ಕರ್ಕಡ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ್‌ರಾಜ್, ಬಜೆಯಲ್ಲಿರುವ ಹಳೆಯ ಪಂಪ್‌ನ ಸಾಮರ್ಥ್ಯ ಕಡಿಮೆ ಆಗಿದೆ. ಅದನ್ನು ಮುಂದಿನ 15 ದಿನಗಳೊಳಗೆ ಬದ ಲಾಯಿಸಿ ಹೊಸ ಪಂಪ್ ಆಳವಡಿಸಲಾಗುವುದು ಎಂದರು. ನೀರಿನ ಸಮಸ್ಯೆ ಕುರಿತು ಡಿ.31ರಂದು ನಡೆಯುವ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಬಜೆ ಡ್ಯಾಂನಲ್ಲಿ ನೀರು ಸೋರಿಕೆಯಾಗುತ್ತಿರುವ ಕುರಿತ ಆರೋಪಕ್ಕೆ ಸ್ಪಷ್ಟನೆ ನೀಡಿದ ಮೋಹನ್‌ರಾಜ್, ಸ್ವರ್ಣ ನದಿಯಲ್ಲಿ ಒಳಹರಿವು ಈಗಲೂ ಇರು ವುದರಿಂದ ಶಿರೂರು ಡ್ಯಾಂನಲ್ಲಿ ನೀರು ತುಂಬಿ ಹರಿಯುತ್ತಿದೆ. ಅಲ್ಲಿಂದ ನೀರು ಬಜೆ ಡ್ಯಾಂಗೆ ಬರುತ್ತಿದೆ. ನಮ್ಮ ಡ್ಯಾಂನಲ್ಲಿ ನೀರು ಸೋರಿಕೆ ಯಾಗುತ್ತಿಲ್ಲ ಎಂದು ತಿಳಿಸಿದರು. ಈ ಹಿಂದೆ ಮಾಡಿರುವ ನಿರ್ಣಯದಂತೆ ನಗರಸಭೆ ಸುತ್ತ ಮುತ್ತಲಿನ ಗ್ರಾಪಂಗಳಿಗೆ 6 ಗಂಟೆಗಳ ನೀರು ಪೂರೈಕೆ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು. ನಾಳೆಯಿಂದ ಗ್ರಾಪಂಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಮೋಹನ್‌ರಾಜ್ ತಿಳಿಸಿದರು.
ಕಸ ಎಸೆಯುವವರ ವಿರುದ್ಧ ಕ್ರಮ
ನಗರದ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕ್ರಮಕ್ಕೆ ಸಭೆಯಲ್ಲಿ ಸದಸ್ಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ಇಂಜಿನಿಯರ್, ಈವರೆಗೆ ಕಸ ಎಸೆಯುವವರಿಂದ 66ಸಾವಿರ ರೂ. ದಂಡ ವಸೂಲಿ ಮಾಡ ಲಾಗಿದೆ. ಅದೇರೀತಿ ಸ್ವಸಹಾಯ ಸಂಘದವರಿಗೂ ಕಸ ಎಸೆಯುವ ಸ್ಥಳವನ್ನು ಶುಚಿಗೊಳಿಸುವಂತೆ ಸೂಚಿಸಿದ್ದೇವೆ ಎಂದರು.
ಹೆಚ್ಚಾಗಿ ಕಸ ಎಸೆಯುವ ಸ್ಥಳಗಳನ್ನು ಗುರುತಿಸಿ ಸಿಸಿ ಕ್ಯಾಮೆರಾವನ್ನು ಆಳವಡಿಸಿ, 5000ರೂ. ದಂಡ ವಿಧಿಸಬೇಕು ಎಂದು ವಿಜಯ ಕೊಡವೂರು ಒತ್ತಾಯಿಸಿದರು. ನಾಗನ ಚಿತ್ರ ಇರುವ ಬ್ಯಾನರ್ ಹಾಕಿದರೆ ಕಸ ಎಸೆಯು ವವರ ಸಂಖ್ಯೆ ಕಡಿಮೆ ಆಗಬಹುದು ಎಂದು ಗಿರೀಶ್ ಅಂಚನ್ ಹೇಳಿದರು.
ರಘುಪತಿ ಭಟ್ ಮಾತನಾಡಿ, ಅಲೆವೂರು ಸೇರಿದಂತೆ ನಗರಸಭೆ ಸುತ್ತ ಮುತ್ತಲಿನ ಗ್ರಾಪಂಗಳಿಂದ ಜ.15ರಿಂದ ಹಸಿ ಹಾಗೂ ಒಣ ತ್ಯಾಜ್ಯ ವನ್ನು ಕೆಜಿಯೊಂದಕ್ಕೆ ಹಣ ನಿಗದಿ ಪಡಿಸಿ ಖರೀದಿಸಲು ಕ್ರಮ ಜರಗಿಸಲಾಗುವುದು ಎಂದರು. ಸ್ವಸಹಾಯ ಸಂಘದವರು ಮನೆಯಿಂದ ಸರಿ ಯಾಗಿ ಕಸ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಜನ ರಸ್ತೆಯಲ್ಲಿ ಎಸೆಯುತ್ತಿದ್ದಾರೆ ಎಂದು ಎ.ಪಿ.ಕೊಡಂಚ ದೂರಿ ದರು. ಕೆಲಸ ಮಾಡದ ಸ್ವಸಹಾಯ ಸಂಘವನ್ನು ಬದಲಾಯಿಸುವಂತೆ ರಘುಪತಿ ಭಟ್ ಸೂಚನೆ ನೀಡಿದರು.
ವಾರಾಹಿ ಪೈಪ್‌ಲೈನ್ ಸಮಸ್ಯೆ
ವಾರಾಹಿಯಿಂದ ಉಡುಪಿ ನಗರಸಭೆ ನೀರು ಪೂರೈಸುವ ಯೋಜನೆ ಸಂಬಂಧ ನಗರದಲ್ಲಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಬಗ್ಗೆ ವಾರಾಹಿ ಕಿರಿಯ ಇಂಜಿನಿಯರ್ ರಾಜಶೇಖರ್ ಸಭೆಯಲ್ಲಿ ಮಾಹಿತಿ ನೀಡಿದರು. ಈ ಕಾಮಗಾರಿಯಿಂದ ಎಪ್ರಿಲ್‌ನಲ್ಲಿ ನಗರದಲ್ಲಿ ನೀರು ಸಮಸ್ಯೆ ತಲೆದೋರಬಹುದು ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ವಾರ್ಡ್‌ವಾರು ಕಾಮಗಾರಿ ನಡೆಸುವಂತೆ ಮತ್ತು ನಗರ ಸಭೆ ಸದಸ್ಯರು ಹಾಗೂ ಇಂಜಿನಿಯರ್ ಅವರ ಸಲಹೆಯಂತೆ ಕಾಮಗಾರಿ ನಡೆಸಲು ಸಭೆ ಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು
ಬೀದಿ ನಾಯಿ ಸೇರಿದಂತೆ ವಾರೀಸುದಾರರು ಇಲ್ಲದ ಪ್ರಾಣಿಗಳಿಗೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಬೀಡಿನಗುಡ್ಡೆಯಲ್ಲಿ ಮೂರು ಸೆಂಟ್ಸ್ ಜಾಗ ಗುರುತಿಸಿರುವ ಬಗ್ಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ನಗರದ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ರಸ್ತೆಗಳಲ್ಲಿ ಮಾರ್ಕರ ಪೈಂಟ್ ಆಳವಡಿಸಿ ಮತ್ತು ರಸ್ತೆ ಸುರಕ್ಷಾ ಪರಿಕರಗಳನ್ನು ನಗರಸಭೆಯಿಂದ ನೀಡುವ ಕುರಿತು ನಗರ ಸಂಚಾರ ಪೊಲೀಸ್ ಠಾಣೆಯಿಂದ ಪ್ರಸ್ತಾವ ಸಲ್ಲಿಸಲಾಯಿತು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು.
ದಲ್ಲಾಳಿಗಳಿಗೂ ಸಿಬ್ಬಂದಿಗಳಿಗೂ ಲಿಂಕ್ ?
ಉಡುಪಿ ನಗರಸಭೆಗೆ ಸಾಮಾನ್ಯ ಜನರು ನೇರವಾಗಿ ಬಂದರೆ ಯಾವುದೇ ಕೆಲಸ ಆಗಲ್ಲ. ಅದೇ ದಲ್ಲಾಳಿಗಳು ಬಂದರೆ ಕೂಡಲೇ ಕೆಲಸ ಆಗು ತ್ತದೆ. ನಗರಸಭೆ ಸಿಬ್ಬಂದಿಗಳಿಗೆ ಮತ್ತು ದಲ್ಲಾಳಿಗಳಿಗೆ ಏನಾದರೂ ಲಿಂಕ್ ಇದೆಯೇ ಎಂದು ಆಡಳಿತ ಪಕ್ಷದ ಸದಸ್ಯ ಪ್ರಭಾಕರ ಪೂಜಾರಿ ಪ್ರಶ್ನಿಸಿದರು.
ನಗರಸಭೆ ದಲ್ಲಾಳಿಗಳು ವಿಸಿಟಿಂಗ್ ಕಾರ್ಡ್‌ಗಳನ್ನು ಮಾಡಿ ಹಂಚುತ್ತಿದ್ದಾರೆ. ನಗರಸಭೆ ಕೂಡ ಆರ್‌ಟಿಓ ಕಚೇರಿ ರೀತಿ ಆಗಿದೆ. ಕಚೇರಿ ಬಂದ್ ಮಾಡಿದ ನಂತರವೂ ದಲ್ಲಾಳಿಗಳು ಕಚೇರಿಗೆ ಬರುತ್ತಾರೆ. ಈ ವಿಚಾರದಲ್ಲಿ ಅಧ್ಯಕ್ಷರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಎರಡು ಮೂರು ದಿನ ಕಚೇರಿಗೆ ರಜೆ ಇದ್ದರೂ ಕಚೇರಿ ಸಮಯದಲ್ಲಿ ಅಧಿ ಕಾರಿಗಳು ಸಾರ್ವಜನಿಕರಿಗೆ ಸಿಗುತ್ತಿಲ್ಲ ಎಂದು ರಮೇಶ್ ಕಾಂಚನ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸಮಯ ನಿಗದಿಪಡಿಸಿರುವಂತೆ ಇನ್ನು ಮುಂದೆ ಮಧ್ಯಾಹ್ನ 3ಗಂಟೆಯಿಂದ ಸಂಜೆ 5.30ರವರೆಗಿನ ಅವಧಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯ ಇರುತ್ತಾರೆ ಎಂದರು.