ಝಕಾತ್ ಫಂಡ್‌ನಿಂದ ಐವರಿಗೆ ದ್ವಿಚಕ್ರ ವಾಹನಗಳ ವಿತರಣೆ
Update: 2020-12-29 19:22 IST
ಉಡುಪಿ, ಡಿ.29: ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ಝಕಾತ್ ಫಂಡ್‌ನಿಂದ ಐದು ಮಂದಿ ಅರ್ಹ ಫಲಾನುಭವಿ ಗಳಿಗೆ ದ್ವಿಚಕ್ರ ವಾಹನಗಳನ್ನು ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ವಿತರಿಸಲಾಯಿತು.
ಮಸೀದಿಯ ಧರ್ಮಗುರು ಮೌಲಾನ ರಶೀದ್ ಅಹ್ಮದ್ ನದ್ವಿ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಪಣಿಯೂರಿನ ಅಹ್ಮದ್, ಕಳತ್ತೂರಿನ ಬದ್ರು ದ್ದೀನ್, ಬೆಳಪುವಿನ ಮುಹಮ್ಮದ್ ಹನೀಫ್, ಹೂಡೆಯ ಮುಹಮ್ಮದ್ ಇಕ್ಬಾಲ್, ವಾರಂಬಳ್ಳಿಯ ಮುಹಮ್ಮದ್ ಕರೀಮ್ ಅವರಿಗೆ ದ್ವಿಚಕ್ರ ವಾಹನ ಗಳನ್ನು ಹಸ್ತಾಂತರಿಸಲಾಯಿತು.
ಮಸೀದಿ ಅಧ್ಯಕ್ಷ ಮುಹಮ್ಮದ್ ಹರ್ಷದ್ ಉಪಸ್ಥಿತರಿದ್ದರು. ವೆಲ್ ಫೇರ್ ಅಧ್ಯಕ್ಷ ವಿ.ಎಸ್. ಉಮ್ಮರ್ ಸ್ವಾಗತಿಸಿದರು. ಸದಸ್ಯ ರಿಯಾಝ್ ಅಹ್ಮದ್ ವಂದಿಸಿದರು. ಮಸೀದಿಯ ಕಾರ್ಯದರ್ಶಿ ಖಲೀಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.