×
Ad

ಕಸದ ವಿಲೇವಾರಿಯಲ್ಲಿ ಉಡುಪಿ ಮುಂದೆ: ಡಾ.ನವೀನ್ ಭಟ್

Update: 2020-12-29 19:29 IST

ಉಡುಪಿ, ಡಿ.29: ಜಿಲ್ಲೆಯಲ್ಲಿ ಕಸ ವಿಲೇವಾರಿಯು ಅಚ್ಚುಕಟ್ಟಾಗಿ ನಡೆ ಯುತ್ತಿದ್ದು, ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಸದ ವಿಲೇವಾರಿಯಲ್ಲಿ ಉಡುಪಿ ಮುಂಚೂಣಿಯಲ್ಲಿದೆ. ಪ್ರತಿ ಮನೆ-ಮನೆಗಳಲ್ಲಿ ಕಸ ವಿಂಗಡಣೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದ್ದಾರೆ.

ಉಡುಪಿ ನಗರಸಬೆ ಮತ್ತು ತೋಟಗಾರಿಕಾ ಇಲಾಖೆ ಸಹಯೋಗದೊಂದಿಗೆ ಇಂದು ಅಲೆವೂರು ಕೋಡಿಯಲ್ಲಿ ನಡೆದ ನಗರ ಮತ್ತು ಗ್ರಾಮೀಣ ಪ್ರದೇಶದ ಹಸಿ ತ್ಯಾಜ್ಯ ನಿರ್ವಹಣೆಗಾಗಿ ರೈತರನ್ನು ಸಂಯೋಜಿಸುವ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮನೆ ಹಂತದಲ್ಲಿ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವ ಹಿಸಲು ಸೂಕ್ತವಾದ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಮಾಡಿಕೊಂಡು ತ್ಯಾಜ್ಯದ ಸಂಗ್ರಹಣೆ ಮತ್ತು ಸಂಸ್ಕರಣೆಯನ್ನು ಮಾಡಬೇಕು ಎಂದು ಅವರು ತಿಳಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌ರಾವ್ ಮಾತನಾಡಿ, ಜಾಗತಿಕವಾಗಿ ಕಸದ ಸಮರ್ಪಕ ವಿಲೇವಾರಿಯ ಸಮಸ್ಯೆ ಇದ್ದು, ಅದರ ನಿರ್ವಹಣೆಯು ತಮ್ಮ ತಮ್ಮ ಮನೆಯಿಂದಲೇ ಪ್ರಾರಂ ಮಾಡಬೇಕು. ಮನೆಯ ಹಂತದಲ್ಲಿ ಕಸವನ್ನು ಅದರ ಮೂಲದಲ್ಲಿಯೇ ವಿಂಗಡಿಸಿ ವೈಜ್ಞಾನಿಕ ವಾಗಿ ನಿರ್ವಹಣೆ ಮಾಡುಮದರಿಂದ ತ್ಯಾಜ್ಯದ ಬಹಳಷ್ಟು ಸಮಸ್ಯೆಗೆ ಮುಕ್ತಿ ಸಿುತ್ತದೆ ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ.ಜೋಶಿ ಚೆರಿಯನ್ ಮಾತನಾಡಿ, ಪರಿಸರದಲ್ಲಿ ನೈಸರ್ಗಿಕವಾಗಿ ದೊರಕುವ ಸಂಪನ್ಮೂಲಗಳನ್ನು ವ್ಯವಸ್ಥಿತ ರೂಪದಲ್ಲಿ ಬಳಸಿಕೊಂಡು, ಪರಿಸರದ ಸ್ವಚ್ಚತೆಯನ್ನು ಕಾಪಾಡಿಕೊಂಡು ಪರಿಸರ ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಬೇಕು ಎಂದರು.

ತೋಟಗಾರಿಕಾ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ಸಹಾಯಕ ನಿರ್ದೇಶಕ ಹೇಮಂತ್, ಸಾಹಸ್ ಸಂಸ್ಥೆಯ ನಿರ್ವಹಣಾಧಿಕಾರಿ ಮಹೇಶ್ ಕುಮಾರ್, ಸಾವಯವ ಕೃಷಿಕ ಗೋಪಾಲ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News