×
Ad

ಕೊರೋನಾಗೆ ಬಲಿಯಾದವರಲ್ಲಿ ಪುರುಷರೇ ಅಧಿಕ: ಆರೋಗ್ಯ ಸಚಿವಾಲಯ

Update: 2020-12-29 20:22 IST

ಹೊಸದಿಲ್ಲಿ, ಡಿ. 29: ಭಾರತದಲ್ಲಿ ಕೊರೋನ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು. ಜನವರಿಯಲ್ಲಿ ಕೊರೋನ ವೈರಸ್ ಸೋಂಕು ಹರಡಲು ಆರಂಭಿಸಿದ ಬಳಿಕ ದೇಶದಲ್ಲಿ ಸಾವನ್ನಪ್ಪಿದ 1.47 ಲಕ್ಷ ಜನರಲ್ಲಿ ಶೇ. 70 ಪುರುಷರು.

ಬ್ರಿಟನ್‌ನಲ್ಲಿ ಕಂಡುಬಂದ ಹೆಚ್ಚು ಆಕ್ರಮಣಶೀಲ ಹೊಸ ರೂಪಾಂತರಿತ ಕೊರೋನ ವೈರಸ್ ಅನ್ನು ದೇಶದಲ್ಲಿ ಪತ್ತೆ ಹಚ್ಚುವ ನಡುವೆ ಕೊರೋನ ವೈರಸ್ ವಿರುದ್ಧದ ತನ್ನ ಹೋರಾಟವನ್ನು ಮಂಗಳವಾರ ವಿವರಿಸುವ ಸಂದರ್ಭ ಆರೋಗ್ಯ ಸಚಿವಾಲಯ ಈ ದತ್ತಾಂಶವನ್ನು ಹಂಚಿಕೊಂಡಿದೆ.

‘‘ಕೊರೋನ ವೈರಸ್ ಸೋಂಕಿನಿಂದ ಸಾವನ್ನಪ್ಪಿದವರಲ್ಲಿ ಶೇ. 70 ಪುರುಷರು. ಮೃತಪಟ್ಟವರಲ್ಲಿ ಶೇ. 45 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರು’’ ಎಂದು ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News