×
Ad

ಮಂಗಳೂರು: ಮತ ಎಣಿಕೆ ಕೇಂದ್ರದ ಎದುರು ಸಂಭ್ರಮಾಚರಣೆ

Update: 2020-12-30 12:58 IST

ಮಂಗಳೂರು, ಡಿ.30: ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯ ಜೋರಾಗಿಯೇ ಮುಂದುವರಿದಿದ್ದು, ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಾವು ಬೆಂಬಲಿಸಿರುವ ಅಭ್ಯರ್ಥಿಗಳ ಗೆಲುವಿನ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಮಂಗಳೂರಿನ ಬೋದೇಲ್ ನಲ್ಲಿರುವ ಮತ ಎಣಿಕೆ ಕೇಂದ್ರದ ಹೊರಗಡೆ ನಿಷೇಧಾಜ್ಞೆ ಹೊರತಾಗಿಯೂ ಬಿಜೆಪಿ, ಕಾಂಗ್ರೆಸ್, ಎಸ್ ಡಿಪಿಐ ಕಾರ್ಯಕರ್ತರು ತಮ್ಮ ಪಕ್ಷಗಳ ಪತಾಕೆಗಳನ್ನು ಹಿಡಿದು ಘೋಷಣೆ ಕೂಗಲಾರಂಭಿಸಿದರು. ಈ ವೇಳೆ ಗುಂಪನ್ನು ಚದುರಿಸಲು ಪೊಲೀಸರು ಮೈಕ್ ಮೂಲಕ ಸೂಚನೆ ನೀಡಿದರು.

ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮೆರವಣಿಗೆ, ಘೋಷಣೆ ಕೂಗುವುದು, ಪಕ್ಷದ ಬಾವುಟಗಳನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News