×
Ad

ಕಾಸರಗೋಡು ಜಿಪಂ ಅಧ್ಯಕ್ಷೆಯಾಗಿ ಬೇಬಿ ಬಾಲಕೃಷ್ಣನ್ ಆಯ್ಕೆ

Update: 2020-12-30 14:14 IST

ಕಾಸರಗೋಡು, ಡಿ.30: ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ ಬೇಬಿ ಬಾಲಕೃಷ್ಣನ್ ಆಯ್ಕೆಗೊಂಡಿದ್ದಾರೆ. 

ಬುಧವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರಿಗೆ 8 ಮತಗಳು ಲಭಿಸಿದವು. ಪ್ರತಿಸ್ಪರ್ಧಿಯಾಗಿದ್ದ ಜಮೀಲಾ ಸಿದ್ದೀಕ್ ಅವರಿಗೆ 7 ಮತಗಳು ಬಂದಿದ್ದುವು. ಇಬ್ಬರು ಸದಸ್ಯರು ಮತದಾನದಲ್ಲಿ ಭಾಗಿಯಾಗಿರಲಿಲ್ಲ.

ಚುನಾವಣೆ ಅಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಬೇಬಿ ಬಾಲಕೃಷ್ಣನ್ ಅವರ ಪದಗ್ರಹಣದಲ್ಲಿ ಪ್ರತಿಜ್ಞೆ ವಿಧಿ ಬೋಧಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News