ರಾಜೀನಾಮೆ ಹಿಂಪಡೆದ ಗುಜರಾತ್ ಬಿಜೆಪಿ ಸಂಸದ ಮನ್ಸೂಖ್ ವಸಾವ
Update: 2020-12-30 15:04 IST
ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ ಮನ್ಸೂಖ್ ಭಾಯ್ ವಸಾವ ಬಿಜೆಪಿಗೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ವಸಾವ ನಿನ್ನೆಯಷ್ಟೇ ರಾಜೀನಾಮೆ ಪತ್ರವನ್ನು ಕಳುಹಿಸಿದ್ದರು.
ಗುಜರಾತ್ ನ ಭರೂಚ್ ನಿಂದ ಆರು ಬಾರಿ ಸಂಸದರಾಗಿರುವ ವಸಾವ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಹಾಗೂ ಇಂದು ಮುಖ್ಯಮಂತ್ರಿ ವಿಜಯ ರೂಪಾನಿ ಅವರನ್ನು ಭೇಟಿಯಾಗಿದ್ದರು. ವಸಾವ ಕೆಲವೊಂದು ವಿಚಾರಕ್ಕೆ ಅಸಮಾಧಾನ ಹೊಂದಿದ್ದು, ಅದನ್ನು ಬಗೆಹರಿಸುವುದಾಗಿ ಭರವಸೆ ನೀಡಲಾಗಿದೆ.
ಮಂಗಳವಾರ ರಾಜೀನಾಮೆ ಪತ್ರವನ್ನು ಕಳುಹಿಸಿದ್ದ ವಸಾವ, ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು.