×
Ad

ಮಾಣಿಲ ಗ್ರಾ.ಪಂ.: 1 ಬಿಜೆಪಿ, 7 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

Update: 2020-12-30 15:14 IST

ಬಂಟ್ವಾಳ, ಡಿ.30: ಮಾಣಿಲ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತ 7 ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 

ಈ ಹಿಂದೆ ಅಧ್ಯಕ್ಷರಾಗಿದ್ದ ರಾಜೇಶ್ ಬಾಳೆಕಲ್ಲು ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿದ್ದಾರೆ. ಶ್ರೀಧರ ಬಾಳೆಕಲ್ಲು, ವನಿತಾ ತಾರಿದಾಳ, ಚಂದ್ರ ಶೇಖರ ಪಕಳಕುಂಜ, ಗೀತಾ ಪಳನೀರು, ಮಾಲತಿ ಎನ್.ಕೆ. ಓಟೆಪಡ್ಪು, ಸುಜಾತ ಮುಜೂರು ಅವರಿಗೆ ಗೆಲುವಾಗಿದೆ‌.  

ಈ ಹಿಂದೆ ಮೂರು ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈ ಬಾರಿ 1 ಸ್ಥಾನ ಪಡೆದುಕೊಂಡಿದೆ. ಈ ಗ್ರಾಮದಲ್ಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಪ್ರಮುಖ ನಾಯಕರು ಪ್ರಚಾರ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News