ಎಲ್ಲೂರು ಗ್ರಾಪಂ: ಒಂದೇ ವಾರ್ಡ್ ನಲ್ಲಿ ಇಬ್ಬರು ಮಾಜಿ ಅಧ್ಯಕ್ಷರುಗಳಿಗೆ ಗೆಲುವು
Update: 2020-12-30 15:24 IST
ಕಾಪು, ಡಿ. 30: ಕುತೂಹಲ ಮೂಡಿಸಿದ್ದ ಎಲ್ಲೂರು ಗ್ರಾಮ ಪಂಚಾಯತ್ ನ ಕುಂಜೂರು ವಾರ್ಡ್ ನಲ್ಲಿ ನಡೆದ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಿಬ್ಬರು ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತೆ, ಗ್ರಾಪಂ ನಿಕಟ ಪೂರ್ವ ಅಧ್ಯಕ್ಷೆ ವಸಂತಿ ಮಧ್ವರಾಜ್ ಜಯಬೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಯಶವಂತ ಶೆಟ್ಟಿ 103 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ದೀಪಾ ಶೆಟ್ಟಿ 50 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
ಎಲ್ಲೂರು ಗ್ರಾಮ ಪಂಚಾಯತ್ ನಲ್ಲಿ ಭಾರೀ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಪರಿಗಣಿಸಿದ್ದ ಕುಂಜೂರು ವಾರ್ಡ್ ಗೆ ನಡೆದ ಚುನಾವಣೆಯಲ್ಲಿ ಸತೀಶ್ ಶೆಟ್ಟಿ, ಸುಕನ್ಯಾ ಆಚಾರ್ಯ, ಶಶಿಕಲಾ ಶೆಟ್ಟಿ ಹಾಗೂ ಅಮೀರುದ್ದೀನ್ ಸೋಲೊಪ್ಪಿಕೊಂಡಿದ್ದಾರೆ.
ಹಿಂದಿನ ಅವಧಿಯಲ್ಲಿ ಮುಖಾಮುಖಿ ಸ್ಪರ್ಧೆಯಲ್ಲಿ ಸತೀಶ್ ಶೆಟ್ಟಿ ಅವರು ಯಶವಂತ ಶೆಟ್ಟಿ ವಿರುದ್ಧ ಸೋತಿದ್ದರು. ಈ ಬಾರಿ ಅದಕ್ಕೆ ವಿರುದ್ಧವಾದ ಫಲಿತಾಂಶ ಬಂದಿದೆ.