ಬಂಟ್ವಾಳ : ಗ್ರಾ.ಪಂ. ಚುನಾವಣೆ ವಿಜಯೋತ್ಸವ ವೇಳೆ ವಾಹನ ಪಲ್ಟಿ: ಓರ್ವ ಮೃತ್ಯು
Update: 2020-12-30 19:30 IST
ಬಂಟ್ವಾಳ, ಡಿ. 30: ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾ.ಪಂ. ವ್ಯಾಪ್ತಿಯ ವಿಜಯೋತ್ಸವದ ವೇಳೆ ವಾಹನ ಪಲ್ಟಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ನೆಟ್ಲದಲ್ಲಿ ನಡೆದಿದೆ.
ನೆಟ್ಲ ನಿವಾಸಿ ನರೇಶ್ (30) ಮೃತ ವ್ಯಕ್ತಿ. ಘಟನೆಯಲ್ಲಿ ವಿಜೇತ ಅಭ್ಯರ್ಥಿ ದೀಪಕ್, ಜಗನ್ನಾಥ, ಗುರುವಪ್ಪ, ಸುಚಿತ್ರಾ, ನಳಿನಿ, ಯೋಗೀಶ್ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿಸಲ್ಪಟ್ಟಿದ್ದಾರೆ.
ಗೋಳ್ತಮಜಲು ಗ್ರಾ.ಪಂ. ವ್ಯಾಪ್ತಿಯ ನೆಟ್ಲ ಭಾಗದ ವಿಜಯೋತ್ಸವದ ವೇಳೆ ಈ ಘಟನೆ ನಡೆದಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.