ಉಡುಪಿ: ವಲಸೆ ಕಾರ್ಮಿಕನಿಗೆ ಗೆಲುವು
Update: 2020-12-30 22:44 IST
ಉಡುಪಿ, ಡಿ.2 ಬಾಗಲಕೋಟೆ ಬಾದಾಮಿ ಮೂಲದ ವಲಸೆ ಕಾರ್ಮಿಕರು ಅಲೆವೂರು -3 ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪ್ರಗತಿನಗರ ನಿವಾಸಿಯಾಗಿರುವ ದುಡಂಪ್ಪ ಬಿ ಬಿದರಿ(ನಾಗರಾಜ್) 504 ಮತ ಗಳಿಸುವ ಮೂಲಕ ಜಯ ಸಾಧಿಸಿದ್ದಾರೆ. ಇವರು 1992ರಲ್ಲಿ ವಲಸೆ ಕಾರ್ಮಿಕರಾಗಿ ಮಣಿಪಾಲಕ್ಕೆ ಆಗಮಿಸಿ, ಮಣ್ಣಪಳ್ಳದಲ್ಲಿ ಗುಡಿಸಲಿನಲ್ಲಿ ವಾಸ ವಾಗಿದ್ದರು. ಬಳಿಕ ಪ್ರಗತಿನಗರದಲ್ಲಿ ಸರಕಾರ ನೀಡಿದ ಜಾಗದಲ್ಲಿ ಸ್ಥಳಾಂತರ ಗೊಂಡ ಅವರು ಇಂದಿಗೂ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.