×
Ad

ಜ.1ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಕ್ಕೆ ರಘುಪತಿ ಭಟ್ ವಿರೋಧ

Update: 2020-12-30 22:53 IST

ಉಡುಪಿ, ಡಿ.30: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಜಿಲ್ಲೆಯ ಟೋಲ್‌ಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಬಾರದು ಎಂದು ಉಡುಪಿ ಶಾಸಕ ರಘುಪತಿ ಭಟ್ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದುಕೊಳ್ಳದೇ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಹೆದ್ದಾರಿ ಕಾಮಗಾರಿ ಸಂಪೂರ್ಣ ಆಗುವವರಿಗೆ ಸ್ಥಳೀಯರಿಗೆ ಎರಡು ಟೋಲ್‌ಗಳಲ್ಲಿ ವಿನಾಯಿತಿ ನೀಡುವ ಬಗ್ಗೆ ಈ ಹಿಂದೆಯೇ ಒಪ್ಪಂದ ಮಾಡಲಾಗಿತ್ತು ಎಂದರು.

ಆದುದರಿಂದ ಜ.1ರಿಂದಲೇ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿರುವುದಕ್ಕೆ ನನ್ನ ಸ್ಪಷ್ಟವಾದ ವಿರೋಧ ಇದೆ. ಅದೇ ರೀತಿ ಟೋಲ್‌ನಲ್ಲಿ ಕನ್ನಡ ಬಾರದ ಉತ್ತರ ಭಾರತದವರ ಬದಲು ಸ್ಥಳೀಯರನ್ನು ನೇಮಕ ಮಾಡಬೇಕು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News