ಶೇ.55ರಷ್ಟು ಜನರು ಪ್ರಧಾನಿ ಮೋದಿಯನ್ನು ಒಪ್ಪಿಕೊಂಡಿದ್ದಾರೆ: ಮಾರ್ನಿಂಗ್ ಕನ್ಸಲ್ಟ್ ಸಮೀಕ್ಷೆ

Update: 2020-12-31 15:32 GMT

ಹೊಸದಿಲ್ಲಿ, ಡಿ.31: ಜಾಗತಿಕ ನಾಯಕರ ಬಗ್ಗೆ ಜನರಲ್ಲಿಯ ಒಟ್ಟು ಅನುಮೋದನೆ ದರ(ಎನ್‌ಎಆರ್)ದ ಮೇಲೆ ನಿಗಾ ಇಡುವ ದತ್ತಾಂಶ ಸಂಸ್ಥೆ ಮಾರ್ನಿಂಗ್ ಕನ್ಸಲ್ಟ್,ಪ್ರಧಾನಿ ಮೋದಿಯವರ ಎನ್‌ಎಆರ್ ಅನ್ನು ಶೇ.55ರಷ್ಟು ಅಧಿಕ ಮಟ್ಟಕ್ಕೆ ನಿಗದಿಗೊಳಿಸಿದೆ.

ವಿಶ್ವಾದ್ಯಂತ ಸಮೀಕ್ಷೆಗಳನ್ನು ಮತ್ತು ಸಂಶೋಧನೆಗಳನ್ನು ನಡೆಸುವ ಮಾರ್ನಿಂಗ್ ಕನ್ಸಲ್ಟ್ ಶೇ.75ರಷ್ಟು ಜನರು ಮೋದಿಯವರನ್ನು ಒಪ್ಪಿಕೊಂಡಿದ್ದರೆ ಶೇ.20ರಷ್ಟು ಜನರು ಅವರನ್ನು ಒಪ್ಪಿಕೊಂಡಿಲ್ಲ. ಇದರಿಂದಾಗಿ ಅವರ ಎನ್‌ಎಆರ್ ಶೇ.55ರಷ್ಟಿದೆ ಎಂದು ತನ್ನ ಇತ್ತೀಚಿನ ಸಮೀಕ್ಷೆಯಲ್ಲಿ ತಿಳಿಸಿದೆ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರ ಎನ್‌ಎಆರ್ ಶೇ.24ರಷ್ಟಿದ್ದರೆ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಎನ್‌ಎಆರ್ ಋಣಾತ್ಮಕವಾಗಿದೆ. ಅವರ ಕೆಲಸಗಳನ್ನು ಅನುಮೋದಿಸಿದವರಿಗಿಂತ ಧಿಕ್ಕರಿಸಿದವರ ಸಂಖ್ಯೆಯೇ ಹೆಚ್ಚಾಗಿದೆ.

ಮಾರ್ನಿಂಗ್ ಕನ್ಟಲ್ಟ್ ಭಾರತದಲ್ಲಿ 2,126 ಜನರನ್ನು ತನ್ನ ಸಮೀಕ್ಷೆಗೊಳಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News