ಗ್ರಾ.ಪಂ ಚುನಾವಣೆ: ಪಾವೂರಿನಲ್ಲಿ ಅತಂತ್ರ ಫಲಿತಾಂಶ

Update: 2020-12-31 16:19 GMT

ಕೊಣಾಜೆ: ಹಿಂದೆ ಕಾಂಗ್ರೆಸ್ ಬೆಂಬಲಿತರ ಆಡಳಿತವಿದ್ದ ಪಾವೂರಿನಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ನಿರ್ಮಣವಾಗಿದೆ. ಐದನೇ ವಾರ್ಡ್‌ನಲ್ಲಿ ನಿನ್ನೆ ನಾಗರಿಕ ಸಮಿತಿಯ ಅಭ್ಯರ್ಥಿ ವಲೇರಿಯನ್ ಡಿಸೋಜ ಮತ್ತು ಕಾಂಗ್ರೆಸ್ ಅಭ್ಯರ್ಥಿ ದಾವೂದ್ ನಡುವೆ ಸಮಬಲದ ಫಲಿತಾಂಶ ಬಂದು ಫಲಿತಾಂಶ ಟೈ ಆಗಿತ್ತು. ಈ ಸಂದರ್ಭ ಮರು ಎಣಿಕೆಯ ಬೇಡಿಕೆಯನ್ನು ನಾಗರಿಕ ಸಮಿತಿ ಮುಂದಿಟ್ಟಿತು. ಮರು ಎಣಿಕೆಯಲ್ಲಿ ವಲೇರಿಯನ್ 285 ಮತಗಳನ್ನು ಪಡೆದು ಎರಡು ಮತಗಳ ಅಂತರದಿಂದ ಜಯ ಗಳಿಸಿದರು. ದಾವೂದ್ 283 ಮತಗಳನ್ನು ಪಡೆದಿದ್ದಾರೆ.

ಇಲ್ಲಿನ 15 ಸ್ಥಾನಗಳ ಪೈಕಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಆರು ಸ್ಥಾನಗಳು ಎಸ್‌ಡಿಪಿಐ, ನಾಲ್ಕು ಸ್ಥಾನಗಳು ನಾಗರಿಕ ಸಮಿತಿ ಪಾಲಾಗಿದೆ. ಮತ್ತು ಕಾಂಗ್ರೆಸ್ ಐದು ಸ್ಥಾನಗಳನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News