ಕೊರೋನ ಸೋಂಕಿಗೆ ಲಸಿಕೆ ಇದೆ, ಆದರೆ….:ಪ್ರಧಾನಿ ಹೇಳಿದ್ದು ಹೀಗೆ…

Update: 2020-12-31 16:39 GMT

ಹೊಸದಿಲ್ಲಿ, ಡಿ.31: ಕೊರೋನ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಮತ್ತು ಸೋಂಕಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದಾರೆ.

 ‘ಲಸಿಕೆ ಲಭಿಸುವವರೆಗೆ ಎಚ್ಚರಿಕೆಯಿರಲಿ’ ಎಂದು ಈ ಹಿಂದೆ ನಾನೇ ಹೇಳಿದ್ದೆ. ಆದರೆ 2021ಕ್ಕೆ ‘ಲಸಿಕೆ ಲಭಿಸಿದೆ, ಆದರೆ ಎಚ್ಚರಿಕೆಯೂ ಇರಲಿ’ ಎಂಬ ಮಂತ್ರ ಪಠಿಸುತ್ತೇನೆ ಎಂದು ಮೋದಿ ಹೇಳಿದರು.

 ಗುಜರಾತ್ನ ರಾಜ್ಕೋಟ್ ನಗರದಲ್ಲಿ ಎಐಐಎಂಎಸ್ಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಕೊರೋನ ವೈರಸ್ ವಿರುದ್ಧದ ಲಸಿಕೆ ಅಭಿವೃದ್ಧಿ ಅಂತಿಮ ಹಂತದಲ್ಲಿದೆ. ದೇಶದಲ್ಲೇ ತಯಾರಿಸಿದ ಲಸಿಕೆಯನ್ನು ಜನತೆ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. ಸೋಂಕಿನ ವಿರುದ್ಧದ ಹೋರಾಟದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸ್ವಚ್ಛತಾ ಕಾರ್ಮಿಕರು ಹಾಗೂ ಇತರ ಮುಂಚೂಣಿ ಸಿಬ್ಬಂದಿಗಳ ಪ್ರಯತ್ನ ಶ್ಲಾಘನೀಯವಾಗಿದೆ. ದೇಶದ ಜನರ ಸುರಕ್ಷತೆಗೆ ತಮ್ಮ ಜೀವವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿದ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ 2020ರ ಅಂತಿಮ ದಿನ ಮುಡಿಪಾಗಿದೆ. ಬೃಹತ್ ಜನಸಂಖ್ಯೆಯ ದೇಶವಾಗಿದ್ದರೂ ಭಾರತ ಕೊರೋನ ವಿರುದ್ಧದ ಹೋರಾಟದಲ್ಲಿ ಇತರ ದೇಶಗಳಿಗಿಂತ ಉತ್ತಮ ಸಾಧನೆ ನಿರ್ವಹಿಸಿದೆ. ಕೊರೋನ ಸೋಂಕಿನ ವಿರುದ್ಧದ ಹೋರಾಟದಲ್ಲಿ ಗುಜರಾತ್ ಶ್ಲಾಘನೀಯ ನಿರ್ವಹಣೆ ತೋರಿದೆ. ಸಶಕ್ತ ವೈದ್ಯಕೀಯ ಮೂಲಸೌಕರ್ಯದ ನೆರವಿನಿಂದ ಗುಜರಾತ್ ಈ ಸಾಧನೆ ತೋರಿದೆ ಎಂದು ಪ್ರಧಾನಿ ಹೇಳಿದರು.

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವೃತ, ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News