‘ಸಪ್ತಪದಿ’ ಸರಳ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

Update: 2020-12-31 16:46 GMT

ಉಡುಪಿ, ಡಿ.31: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ‘ಸಪ್ತಪದಿ’ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಜನವರಿ 15ರಂದು ಬೆಳಗ್ಗೆ 10:30ರಿಂದ 11:15ರ ವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 7 ಕೊನೆಯ ದಿನವಾಗಿದೆ. ಅಲ್ಲದೇ ಜನವರಿ 20ರಂದು ಬೆಳಗ್ಗೆ 10:15ರಿಂದ 10:45ರವರೆಗೆ ವಿವಾಹ ನಡೆಯಲಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. ಫೆಬ್ರವರಿ 17ರಂದು ಬೆಳಗ್ಗೆ 12ರಿಂದ 12:30ರವರೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನ ಹಾಗೂ ಫೆಬ್ರವರಿ 25ರಂದು ಬೆಳಗ್ಗೆ 10:30ರಿಂದ 11ರವರೆಗೆ ಸಾಮೂಹಿಕ ವಿವಾಹ ನಡೆಯಲಿದ್ದು ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.

ಜಿಲ್ಲೆಯ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲು ಇಚ್ಛಿಸುವ ವಧು- ವರರು ಆಯಾಯ ದೇವಾಲಯಗಳ ಕಾರ್ಯನಿರ್ವಹಣಾಧಿಕಾರಿ/ ಆಡಳಿತಾಧಿಕಾರಿ/ಅನುವಂಶಿಕ ಮೊಕ್ತೇಸರರು ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಿಂದ ಅರ್ಜಿಯನ್ನು ಪಡೆದು ವಿವಾಹಕ್ಕೆ ನಿಗದಿಪಡಿಸಿದ ದಿನಕ್ಕಿಂತ ಒಂದು ವಾರದ ಮುಂಚಿತವಾಗಿ ಅರ್ಜಿಯಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ ಮರು ಸಲ್ಲಿಸುವಂತೆ ಜಿಲ್ಲಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾಧಾಯ ದತ್ತಿ ಇಲಾಖೆಯ ಸಹಾಯಕ ಆಯ ುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News