​ವಿದ್ಯಾರ್ಥಿ ವೇತನ: ಅರ್ಜಿ ಸಲ್ಲಿಕೆಗೆ ಜ.20 ಕೊನೆಯ ದಿನ

Update: 2020-12-31 17:00 GMT

ಮಂಗಳೂರು, ಡಿ.31: ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಜ.20ರವರೆಗೆ ವಿಸ್ತರಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‌ಸೈಟ್ www.dom.karnataka.gov.in ಅಥವಾ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಅಝಾದ್ ಭವನ ಓಲ್ಡ್ಕೆಂಟ್ ರೋಡ್ ಪಾಂಡೇಶ್ವರ ಮಂಗಳೂರು (ದೂ.ಸಂ: 0824-2433078), ಬಂಟ್ವಾಳ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ವಾಯುಮಾಲಿನ್ಯ ತಪಾಸಣಾ ಕಟ್ಟಡ, ಮಿತ್ತಬೈಲ್ (ದೂ.ಸಂ:08255-232470), ಪುತ್ತೂರು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಪಂ ಕಟ್ಟಡ, ಸಾಮರ್ಥ್ಯ ಸೌಧ, ಒಂದನೇ ಮಹಡಿ ಪುತ್ತೂರು (ದೂ.ಸಂ: 08251-237078), ಬೆಳ್ತಂಗಡಿ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಪಂ ಕಟ್ಟಡ ಕೈಗಾರಿಕಾ ಇಲಾಖೆ ಹತ್ತಿರ ಬೆಳ್ತಂಗಡಿ (ದೂ.ಸಂ: 08256-233336), ಸುಳ್ಯ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಪಂ ಕಟ್ಟಡ, ಜೂನಿಯರ್ ಕಾಲೇಜು ಎದುರುಗಡೆ (ದೂ.ಸಂ 08257-230666) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News