ಬಾವಿ ನೀರಿನಲ್ಲಿ ಮುಳುಗಿ ಯುವಕ ಮೃತ್ಯು
Update: 2020-12-31 22:46 IST
ಮಣಿಪಾಲ, ಡಿ.31:ಬಾವಿಯ ನೀರೆತ್ತುವ ಪೈಪಿನ ಫುಟ್ಬಾಲ್‌ನಲ್ಲಿದ್ದ ಕಸ ತೆಗೆಯಲು ಬಾವಿಗಿಳಿದ ಯುವಕರೊಬ್ಬರು ಕೈಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಸುರೇಶ್ ಎಂಬವರು ಮೃತಪಟ್ಟ ಘಟನೆ ಬುಧವಾರ ಹೆರ್ಗಾ ಗ್ರಾಮದ ಪರ್ಕಳದಿಂದ ವರದಿಯಾಗಿದೆ.
ಸುರೇಶ್ ಅವರು ತಮ್ಮ ಚಿಕ್ಕಪ್ಪ ಜಯಾಕರ ಅವರೊಂದಿಗೆ ಬಾವಿ ಸ್ವಚ್ಠ ಮಾಡಲು ತೆರಳಿದ್ದು, ಪರ್ಕಳದ ಗ್ಯಾಟಸನ್ ಬಳಿಯ ಬಾವಿಯಲ್ಲಿ ಕೆಲಸ ಮಾಡುತ್ತಿರುವಾಗ ಅಕಸ್ಮಿಕವಾಗಿ ಕೈಜಾರಿ ಬಾವಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಮೇಲಕ್ಕೆತ್ತಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ, ಅವರಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.