ಅರಣ್ಯಾಧಿಕಾರಿಗಳಿಂದ ಅತಿಕ್ರಮ ತೆರವು ಕಾರ್ಯಾಚರಣೆ; ಜಿಲ್ಲಾಧಿಕಾರಿಗೆ ದೂರು

Update: 2020-12-31 17:25 GMT

ಭಟ್ಕಳ: ಗುರುವಾರ ಜಾಲಿ ಪಟ್ಟಣಪಂಚಯತ್ ವ್ಯಾಪ್ತಿಯ ಕಾರಗದ್ದೆ ವಾರ್ಡಿನಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ನಿರ್ಮಾಣ ಹಂತದಲ್ಲಿದ್ದ ಮನೆ ಹಾಗೂ ಕಂಪೌಂಡ್ ಗೋಡೆಗಳನ್ನು ತೆರವುಗೊಳಿಸಿದ್ದಾರೆ. 

ಇದರಿಂದಾಗಿ ಆಕ್ರೋಶಗೊಂಡ ಸಾರ್ವಜನಿಕರು ಇಂದು ಭಟ್ಕಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದು ವಸತಿ ಮನೆಗಳ ಅಲ್ಪಸ್ವಲ್ಪ ರಿಪೇರಿಯನ್ನು ಮಾಡಿಕೊಳ್ಳಲು ಬಿಡುತ್ತಿಲ್ಲ. ಯಾರೋ ಮಾಹಿತಿ ನೀಡಿದ್ದಾರೆ ಎಂದು ಹೇಳಿಕೊಂಡು ಏಕಾಎಕಿ 15-20 ಅರಣ್ಯ ಸಿಬ್ಬಂದಿ ಗಾರ್ಡುಗಳು ಮನೆಗಳಿಗೆ ನುಗ್ಗುತ್ತಾರೆ ಎಂದು ಆರೋಪಿಸಿದ್ದಾರೆ. 

ಅರಣ್ಯಾಧಿಕಾರಿಗಳ ಕ್ರಮವನ್ನು ಖಂಡಿಸಿರುವ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೌಸೀಫ್ ಬ್ಯಾರಿ ಅರಣ್ಯಾಧಿಕಾರಿಗಳಿಗೆ ಕಾನೂನು ಅರಿವು ಇಲ್ಲದಂತೆ ಕಾಣುತ್ತಿದೆ. ಯಾವುದೇ ನೋಟಿಸ್ ನೀಡದೆ ಏಕಾಎಕಿ ನುಗ್ಗುತ್ತಿರುವುದು ಕಂಡರೆ ಕಾನೂನಿನ ಗಂಧಗಾಳಿಯೂ ಇವರಿಗಿಲ್ಲ ಎಂಬಂತೆ ತೋರುತ್ತದೆ ಎಂದು ಪ್ರತ್ರಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News