ಜ.2ರಂದು ಕಂಬಳ ಸಮಿತಿ ಮಹಾಸೆ

Update: 2020-12-31 18:24 GMT

ಮಂಗಳೂರು: ಜಿಲ್ಲಾ ಕಂಬಳ ಸಮಿತಿ ಮಹಾಸಭೆಯು ಜ.2ರಂದು ಮಧ್ಯಾಹ್ನ 3ಗಂಟೆಗೆ ಮೂಡುಬಿದಿರೆ ಸಮಾಜ ಸೇವಾ ಮಂದಿರದಲ್ಲಿ ಜರಗಲಿದೆ.

ಈ ಸಭೆಯಲ್ಲಿ ಮೂರೂ ಜಿಲ್ಲೆಗಳ ಕಂಬಳ ಓಟದ ಕೋಣಗಳ ಯಜಮಾನರುಗಳು, ಕಂಬಳ ವ್ಯವಸ್ಥಾಪಕರುಗಳು, ತೀರ್ಪುಗಾರರು, ಓಟಗಾರರು, ಗಂತಿನಲ್ಲಿ ಕೋಣಗಳನ್ನು ನಿಯಂತ್ರಿಸುವವರು ಹಾಗೂ ಕಂಬಳಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News