ಬಿಜೆಪಿಯ ಕೊರೋನ ಲಸಿಕೆಯನ್ನು ನಾನು ನಂಬುವುದಾದರೂ ಹೇಗೆ?: ಅಖಿಲೇಶ್‌ ಯಾದವ್ ಪ್ರಶ್ನೆ

Update: 2021-01-02 12:40 GMT

ಲಕ್ನೋ,ಜ.2: ಭಾರತವು ಕೊರೋನ ವೈರಸ್‌ ವಿರುದ್ಧ ಮೊದಲ ಲಸಿಕೆ ನೀಡಿಕೆಯನ್ನು ಆರಂಭಿಸುವ ಪ್ರಥಮ ಹಂತದಲೇ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ "ಬಿಜೆಪಿಯು ನೀಡುತ್ತಿರುವ ಈ ಲಸಿಕೆಯ ಮೇಲೆ ನಾನು ವಿಶ್ವಾಸವಿರಿಸುವುದಾದರೂ ಹೇಗೆ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಈ ಪ್ರಶ್ನೆಗೆ ಬಿಜೆಪಿ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ಶನಿವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್‌ ಯಾದವ್‌, "ನಾನು ಬಿಜೆಪಿ ಸರಕಾರ ನೀಡುತ್ತಿರುವ ಕೊರೋನ ಲಸಿಕೆಯನ್ನು ಹೇಗೆ ನಂಬಲಿ? ನಮಗೆ ಬಿಜೆಪಿಗರ ಲಸಿಕೆಯ ಅಗತ್ಯವಿಲ್ಲ. ನಮ್ಮ ಪಕ್ಷವು 2022ರಲಿ ಆಡಳಿತಕ್ಕೆ ಬರಲಿದ್ದು, ನೆಲ್ಲರಿಗೂ ಉಚಿತ ಲಸಿಕೆ ವಿತರಿಸಲಾಗುವುದು ಎಂಬ ಹೇಳಿಕೆ ನೀಡಿದ್ದರು ಎಂದು ndtv.com ವರದಿ ಮಾಡಿದೆ.

"ಅಖಿಲೇಶ್‌ ಯಾದವ್‌ ರವರ ಈ ಹೇಳಿಕೆಯು ಸರಿಯಲ್ಲ. ಕೊರೋನ ಲಸಿಕೆಯನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ. ಅವರು ಕೇವಲ ಲಸಿಕೆಯನ್ನು, ಬಿಜೆಪಿಯನ್ನು ಮಾತ್ರವಲ್ಲದೇ, ದೇಶದ ತಜ್ಞ ವೈದ್ಯರನ್ನು ಮತ್ತು ವಿಜ್ಞಾನಿಗಳನ್ನು ಅವಮಾನಿಸುತ್ತಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹೇಳಿಕೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News