ಎಸ್ಸೆಸ್ಸೆಫ್ ಮೇನಾಲ ಶಾಖೆ : ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ
ಮಂಗಳೂರು : ಎಸ್ಸೆಸ್ಸೆಫ್ ಮೇನಾಲ ಶಾಖೆ (ಈಶ್ವರಮಂಗಲ ಇದರ ವಾರ್ಷಿಕ ಮಹಾಸಭೆಯು ಇಸ್ ಹಾಕ್ ಮಿಸ್ಬಾಯಿ ಅವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ಸ್ವಾಹಾಬಾದಲ್ಲಿ ಇತ್ತೀಚೆಗೆ ನಡೆಯಿತು.
ಈ ಸಭೆಯನ್ನು ಕೆಸಿಎಫ್ ನೇತಾರ ಎಂಎ ಮಹಮ್ಮದ್ ಕುಂಞಿ ಅಬುಧಾಬಿ ಉದ್ಘಾಟಿಸಿದರು. ಎಸ್ ವೈ ಎಸ್ ಮೇನಾಲ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಝಕರಿಯ ಸಖಾಫಿ ಸಂಘಟನೆಯ ಕುರಿತು ತರಬೇತಿ ನೀಡಿದರು. ಶಾಖಾ ಪ್ರಧಾನ ಕಾರ್ಯದರ್ಶಿ ಅಬ್ಬು ಎಎಚ್ ವಾರ್ಷಿಕ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು, ನಂತರ ಸ್ಪೆಕ್ಟರ್ ಚುನಾವಣೆ ವೀಕ್ಷಕರಾಗಿ ಆಗಮಿಸಿದ ಶಫೀಕ್ ಸಅದಿ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ರೂಪಿಸಲಾಯಿತು.
ಅಧ್ಯಕ್ಷರಾಗಿ ಸ್ವಾದಿಕ್ ಇಮ್ದಾದಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬು ಎಎಚ್ ,ಕೋಶಾಧಿಕಾರಿಯಾಗಿ ಮುಸ್ತಾಫ ದರ್ಕಾಸ್, ಉಪಾಧ್ಯಕ್ಷರಾಗಿ ಶಫೀಕ್ ಸಅದಿ ಹಾಗೂ ಇಸ್ಮಾಯಿಲ್ ಎಂಎ, ಕಾರ್ಯದರ್ಶಿಯಾಗಿ ನಿಝಾಮ್ ಮೇನಾಲ ಹಾಗೂ ರಷೀದ್ ಕುದ್ರೋಲಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅಫ್ನಾಝ್, ದಅವಾ ಕನ್ವಿರಾಗಿ ಹಾಫಿಲ್ ರಾಹಿಲ್, ಮೀಡಿಯಾ ಸೇಲ್ ಸದಸ್ಯರಾಗಿ ನೌಶಾದ್ ರೋಯಲ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಶುದ್ದೀನ್ ನೀರಳಿಗೆ, ಶಫೀಕ್ ಎಂಎ, ಫಾರೂಖ್, ಮುಬಾಶ್ಶೀರ್, ರಝಾಕ್ ದರ್ಕಾಸ್, ನೌಶಾದ್ ಜಿಕೆ, ಇಬ್ರಾಹಿಮ್ ಬಿಸಿ, ರಷೀದ್ ಕೆಎಂ, ಫೈಝಲ್ ಬಿಸಿ, ಸಭಿತ್, ಆಫ್ರಿಝ್, ಸಹದ್, ಉಭೈಸ್ ಕೆಎಂ, ಸಮ್ಸೀರ್ ಇವರನ್ನು ಅಯ್ಕೆ ಮಾಡಲಾಯಿತು.
ಸಭೆಯಲ್ಲಿ ಎಸ್ ವೈ ಎಸ್ ಮೇನಾಲ ಶಾಖಾ ನೇತಾರದ ಅಬ್ಬುಲ್ಲಾ ಉಸ್ತಾದ್, ಖಾಲೀದ್ ಹಾಜಿ,ರಝಾಕ್ ಬಿಎಂ,ಅಬ್ಬುಲ್ಲ ಮೇನಾಸಿಕಾಣ, ಅದ್ದುಚ್ಚ ಮೇನಾಲ, ಹನೀಫ್ ಕುದ್ರೋಲಿ ಹಾಗೂ ಕೆಸಿಎಫ್ ನೇತಾರ ಬಶೀರ್ ಝೈನಿ ಮದೀನಾ ಉಪಸ್ಥಿತರಿದ್ದರು. ನೂತನ ಪ್ರಧಾನ ಕಾರ್ಯದರ್ಶಿ ಅಬ್ಬು ಎಎಚ್ ಸ್ವಾಗತಿಸಿ, ವಂದಿಸಿದರು.