ವಿದ್ಯುತ್ ಸಂಪರ್ಕ ರಹಿತ ಮನೆಗಳಿಗೆ ಸೋಲಾರ್ ದೀಪ ಅಳವಡಿಕೆ
Update: 2021-01-02 21:09 IST
ಉಡುಪಿ, ಜ.2: ಉಡುಪಿ ಇನ್ನರ್ ವೀಲ್ ಕ್ಲಬ್ ಹಾಗೂ ಸೆಲ್ಕೋ ಸೋಲಾರ್ ಸಹಯೋಗದಿಂದ ಬೀಡಿನಗುಡ್ಡೆಯ ಕಂಬಳದ ಮನೆ ಕಾಲೊನಿಯ ಐದು ವಿದ್ಯುತ್ ಸಂಪರ್ಕರಹಿತ ಮನೆಗಳಿಗೆ ಸೌ ದೀಪಗಳನ್ನು ಅಳವಡಿಸಲಾಯಿತು.
ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಹಾಗೂ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಮಾಲತಿ ತಂತ್ರಿ ಸೌರದೀಪಗಳನ್ನು ವಿದ್ಯುಕ್ತವಾಗಿ ಬೆಳಗಿಸಿ ಉದ್ಘಾಟಿಸಿದರು. ಉಡುಪಿ ನಗರಸಬೆ ಉಪಾಧ್ಯಕ್ಷೆ ಲಕ್ಷ್ಮೀ ಕೊಳ, ನಗರಸಭಾ ಸದಸ್ಯೆ ರಜನಿ ಹೆಬ್ಬಾರ್, ಸೆಲ್ಕೋ ವಲಯ ಪ್ರಬಂಧಕ ಸುರೇಶ್ ನಾಯ್ಕ್ ಅತಿಥಿಗಳಾಗಿ ಭಾಗವಹಿಸಿದ್ದರು.
ಕ್ಲಬ್ಬಿನ ಸಂಯೋಜಕಿ ದೀಪಾ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ಸತ್ಯವತಿ ಹೆಬ್ಬಾರ್ ವಂದಿಸಿದರು. ಇನ್ನರ್‌ವೀಲ್ ಪದಾಧಿಕಾರಿಗಳಾದ ಶುಭಾ ಬಾಸ್ರಿ, ವನಿತಾ ಉಪಾಧ್ಯಾಯ, ರವಿಕಲಾ, ಜಯಲಕ್ಷ್ಮೀ ಉಪಾಧ್ಯ, ಶಾಲಿನಿ ಹಾಗೂ ಸೆಲ್ಕೋ ಸಂಸ್ಥೆಯ ಅಧಿಕಾರಿ ಸುಬ್ರಮಣ್ಯ ಉಪಸ್ಥಿತರಿದ್ದರು.