ಮುಂಬೈ ತಂಡಕ್ಕೆಅರ್ಜುನ್ ತೆಂಡುಲ್ಕರ್

Update: 2021-01-02 18:42 GMT

ಮುಂಬೈ,: ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟ್ರೋಫಿಯ ಲೀಗ್ ಹಂತದ ಪಂದ್ಯಾವಳಿಗೆ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಮತ್ತು ಸೀಮರ್ ಕೃತಿಕ್ ಹನಾಗವಾಡಿ ಅವರನ್ನು ಮುಂಬೈ ತಂಡಕ್ಕೆ ಸೇರಿಸಲಾಗಿದೆ. ಅರ್ಜುನ್ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ಪುತ್ರ. ಕೋವಿಡ್‌ನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ಋತುವಿನ ಮೊದಲ ಪಂದ್ಯಾವಳಿ ಜನವರಿ 10 ರಂದು ಪ್ರಾರಂಭವಾಗಲಿದೆ.

 ದಿಲ್ಲಿ, ಹರ್ಯಾಣ, ಕೇರಳ, ಆಂಧ್ರ ಮತ್ತು ಪುದುಚೇರಿಗಳನ್ನು ಒಳಗೊಂಡಿರುವ ಇ ಗುಂಪಿನಲ್ಲಿ ಮುಂಬೈ ಸೆಣಸಾಡಲಿದೆ. ಜನವರಿ 11, 13, 15, 17 ಮತ್ತು 19 ರಂದು ಮುಂಬೈ ತನ್ನ ಗ್ರೂಪ್‌ನ ತಂಡಗಳನ್ನು ಎದುರಿಸಲಿದೆ. ನಾಕೌಟ್ ಪಂದ್ಯಾವಳಿ ಅಹಮದಾಬಾದ್‌ನಲ್ಲಿ ನಡೆಯಲಿದೆ.

‘‘ಮೂರು ದಿನಗಳ ಹಿಂದೆ, ಬಿಸಿಸಿಐ ಎಲ್ಲಾ ತಂಡ ಗಳಿಗೆ 22 ಆಟಗಾರರನ್ನು ಆಯ್ಕೆ ಮಾಡಲು ಅವಕಾಶ ಮಾಡಿಕೊಟ್ಟಿತು, ಏಕೆಂದರೆ ಎಲ್ಲಾ ಆಟಗಾರರು ಜೈವಿಕ ಸುರಕ್ಷತಾ ವಲಯದಲ್ಲಿ ಇರಬೇಕಾಗುತ್ತದೆ. ನೆಟ್ ಬೌಲರ್‌ಗಳು ಮತ್ತು ಬದಲಿ ಆಟಗಾರರನ್ನು ಸಹ ಹೊರಗಿನಿಂದ ಕರೆಯಲಾಗುವುದಿಲ್ಲ. ಅರ್ಜುನ್ ಮತ್ತು ಹನಾಗವಾಡಿ ಅವರನ್ನು 21 ಮತ್ತು 22ನೇ ಸದಸ್ಯರಾಗಿ ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ’’ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ (ಎಂಸಿಎ) ತಿಳಿಸಿದೆ. ಅರ್ಜುನ್ ಭಾರತ ಅಂಡರ್-19ತಂಡಕ್ಕಾಗಿ ಮತ್ತು ಮುಂಬೈ ಪರ ಈ ಹಿಂದೆ ವಿವಿಧ ವಯೋಮಾನದ ತಂಡಗಳಿಗಾಗಿ ಆಡಿದ್ದಾರೆ.

ಅರ್ಜುನ್ ಮತ್ತು ಹನಾಗವಾಡಿ ಅವರಲ್ಲದೆ ಮುಂಬೈ ತಂಡದಲ್ಲಿ ವೇಗದ ಆಟಗಾರರು ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ, ಮಿನಾದ್ ಮಂಜ್ರೇಕರ್ ಮತ್ತು ಪ್ರಥಮೇಶ್ ದಾಕ್.

 ಇತ್ತೀಚೆಗೆ ಆಸ್ಟ್ರೇಲಿಯ ಪ್ರವಾಸದಲ್ಲಿ ಭುಜದ ಗಾಯದಿಂದ ಬಳಲುತ್ತಿದ್ದ ಭಾರತದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಅವರು ಲೀಗ್ ಹಂತಕ್ಕೆ ಮುಂಬೈ ತಂಡದಲ್ಲಿರುತ್ತಾರೆ. ಸಲಿಲ್ ಅಂಕೋಲಾ ನೇತೃತ್ವದ ಹೊಸ ಆಯ್ಕೆ ಸಮಿತಿಯು ತಂಡದ ನಾಯಕನಾಗಿ ರೂಪ ಕು ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದೆ. ಅನುಭವಿ ವಿಕೆಟ್‌ಕೀಪರ್ ಆದಿತ್ಯ ತಾರೆ ತಂಡದ ಉಪನಾಯಕರಾಗಲಿದ್ದಾರೆ.

ಪರಿಷ್ಕೃತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಆದಿತ್ಯ ತಾರೆ (ಉಪನಾಯಕ), ಯಶಸ್ವಿ ಜೈಸ್ವಾಲ್, ಆಕರ್ಶಿ ತ್ ಗೊಮೆಲ್, ಸರ್ಫರಾಜ್ ಖಾನ್, ಸಿದ್ಧೇಶ್ ಲಾಡ್, ಶಿವಮ್ ದುಬೆ, ಶುಭಮ್ ರಂಜನೆ, ಸುಜಿತ್ ನಾಯಕ್, ಸೈರಾಜ್ ಪಾಟೀಲ್, ತುಷಾರ್‌ದೇಶಪಾಂಡೆ, ಮಿನಾರ್ನ್ ಪ್ರಥಮೇಶ್ ಡೇಕ್, ಅಥರ್ವ ಅಂಕೋಲೆಕರ್, ಶಶಾಂಕ್ ಅತ್ತಾರ್ಡೆ, ಶಮ್ಸ್ ಮುಲಾನಿ, ಹಾರ್ದಿಕ್ ತಮೋರ್, ಆಕಾಶ್ ಪಾರ್ಕರ್, ಸುಫಿಯಾನ್ ಶೇಖ್, ಅರ್ಜುನ್ ತೆಂಡುಲ್ಕರ್, ಕೃತಿಕ್ ಹನಾಗವಾಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News