ನಾದಿನಿಯ ಅತ್ಯಾಚಾರ ಆರೋಪ: ಬಾವನ ವಿರುದ್ಧ ಪ್ರಕರಣ ದಾಖಲು
Update: 2021-01-03 11:09 IST
ಬಂಟ್ವಾಳ, ಜ.3: ವಿಟ್ಲ ಪಡ್ನೂರು ಗ್ರಾಮದ ಕಡಂಬು ಬೆದ್ರಕಾಡು ಎಂಬಲ್ಲಿನ ಯುವತಿಯೊಬ್ಬಳನ್ನು ಆಕೆಯ ಬಾವ (ಅಕ್ಕನ ಗಂಡ) ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಶೀರ್ ಎಂಬಾತ ಆರೋಪಿಯಾಗಿದ್ದು, ಯುವತಿ ಮತ್ತು ಆಕೆಯ ತಾಯಿ ಇಬ್ಬರೇ ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಆತ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ.
ಅತ್ಯಾಚಾರ ಎಸಗಿರುವುದು ಅಲ್ಲದೆ ಮೊಬೈಲ್ ನಲ್ಲಿ ಸೆರೆ ಹಿಡಿದ ಯುವತಿಯ ನಗ್ನ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.