ಫೈಝರ್ ಕೋವಿಡ್ ಲಸಿಕೆ ಸ್ವೀಕರಿಸಿದ ಬಳಿಕ ಆಸ್ಪತ್ರೆಗೆ ದಾಖಲಾದ ವೈದ್ಯೆ

Update: 2021-01-03 05:55 GMT

ಮೆಕ್ಸಿಕೊ ಸಿಟಿ: ಫೈಝರ್-ಬಯೋಎನ್‍ಟೆಕ್ ಅಭಿವೃದ್ದಿಪಡಿಸಿರುವ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ ಬಳಿಕ ಮೆಕ್ಸಿಕೋದ 32ರ ವಯಸ್ಸಿನ ವೈದ್ಯೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಈ ಪ್ರಕರಣದ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದು ಮೆಕ್ಸಿಕೋದ ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆ ಸ್ವೀಕರಿಸಿದ ಬಳಿಕ ವೈದ್ಯೆಗೆ ಉಸಿರಾಟದ ತೊಂದರೆ ಹಾಗೂ ಚರ್ಮದ ಅಲರ್ಜಿ ಉಂಟಾಗಿದ್ದು, ವೈದ್ಯೆಯನ್ನು ಉತ್ತರ ರಾಜ್ಯದ ನ್ಯುಯೆವೊ ಲಿಯಾನ್‍ನ ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ವೈದ್ಯೆಯ ಹೆಸರನ್ನು ಈ ತನಕ ಬಹಿರಂಗಪಡಿಸಲಾಗಿಲ್ಲ.

ಆರಂಭಿಕ ರೋಗ ನಿರ್ಣಯವು ಎನ್ಸೆಫಲೋಮೈಲಿಟಿಸ್ ಎಂದು ಶುಕ್ರವಾರ ರಾತ್ರಿ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ. ಎನ್ಸೆಫಲೋಮೈಲಿಟಿಸ್ ಎನ್ನುವುದು ಮೆದುಳು ಹಾಗೂ ಬೆನ್ನುಹುರಿಯ ಊರಿಯೂತವಾಗಿದೆ.

ವೈದ್ಯೆಗೆ ಪದೇ ಪದೇ ಅಲರ್ಜಿ ಆಗುವ ಸಮಸ್ಯೆಯಿದೆ. ಲಸಿಕೆ ಹಾಕಿದ ನಂತರ ಯಾರಿಗಾದರೂ ಉರಿಯೂತವನ್ನು ಕಂಡುಬಂದಿರುವುಕ್ಕೆ ಕ್ಲಿನಿಕಲ್ ಪರೀಕ್ಷೆಗಳಿಂದ ಯಾವುದೇ ಪುರಾವೆಗಳಿಲ್ಲ ಎಂದು ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News