×
Ad

ಕಡವಿನಕಟ್ಟಾ ನದಿಯಿಂದ ಹರಿದು ಬರುವ ಕಾಲುವೆಗಳಲ್ಲಿ ಕಸ ರಾಶಿ: ರೈತರ ಆಕ್ರೋಶ

Update: 2021-01-03 19:03 IST

ಭಟ್ಕಳ : ತಾಲೂಕಿನ ಶಿರಾಲಿ, ಬೇಂಗ್ರೆ, ಚಿತ್ರಾಪುರ, ನೀರಕಂಠಾ ಗ್ರಾಮದ ಹೊಲಗದ್ದೆಗಳಿಗೆ ನೀರುಣಿಸುವ ಕಡವಿನಾಕಟ್ಟಾ ನದಿಯ ಕಾಲುಗಳಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು ಸಣ್ಣ ನೀರಾವರಿ ಇಲಾಖೆ ಕಳೆದ ಎರಡು ವರ್ಷಗಳಿಂದ ಕಾಲುವೆಗಳನ್ನು ಸ್ವಚ್ಚಗೊಳಿಸದೆ ಇರುವುದ ರಿಂದಾಗಿ ಈ ಭಾಗದ ರೈತರು ತೊಂದರೆಯನ್ನು ಅನುಭವಿಸುತ್ತಿದ್ದು ಮೂರು ದಿನಗಳೊಳಗೆ ನದಿ ಕಾಲುವೆಗಳನ್ನು ಸ್ವಚ್ಚಗೊಳಿಸದೆ ಇದ್ದರೆ ಹೆದ್ದಾರಿ ತಡೆದು ಧರಣಿ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದ್ದಾರೆ.

ತಾಲೂಕಿನ ವಿವಿಧ ಗ್ರಾಮಗಳ ಹೊಲಗದ್ದೆಗಳಿಗೆ ಜೀವನದಾನ ನೀಡುವ ಈ ಕಾಲುವೆಗಳಿಂದಾಗಿ ಈ ಭಾಗದ ರೈತ ಸಮುದಾಯ ಭತ್ತ, ಕಡಲೆಕಾಯಿ ಬೆಳೆ ಬೆಳೆದು ಬದುಕು ಸಾಗಿಸುತ್ತಾರೆ. ಕಾಲುವೆಗಳಲ್ಲಿ ಕಸ, ಮಣ್ಣು ಶೇಖರಣೆಗೊಂಡಿರುವುದರಿಂದಾಗಿ ನೀರಿನ ಹರಿವು ಕಡಿಮೆಯಾಗಿ ನೀರಿನ ಕೊರೆತೆ ಉಂಟಾಗಿದೆ. ಇದರಿಂದಾಗಿ ಬೇಸಿಗೆಯಲ್ಲಿ ಕೃಷಿ ಕೆಲಸಗಳು ಸ್ಥಗಿತಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕ ನಿರಾವರಿ ಇಲಾಖೆಯ ನಿರ್ಲಕ್ಷ್ಯತನದಿಂದಾಗಿಯೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News