ಸತ್ತ ಕಾಗೆಗಳಲ್ಲಿ ವೈರಸ್‌ ಪತ್ತೆ: ರಾಜಸ್ಥಾನದಲ್ಲಿ ಹಕ್ಕಿಜ್ವರ ಭೀತಿ!

Update: 2021-01-03 13:47 GMT

ಜೈಪುರ,ಜ.03: ಅನಿರೀಕ್ಷಿತವಾಗಿ ರಾಜಸ್ಥಾನದ ಹಲವಾರು ಜಿಲ್ಲೆಗಳಲ್ಲಿ ಕಾಗೆಗಳು ಸಾಯುತ್ತಿರುವುದು ಸದ್ಯ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದ ಜೈಪುರ, ಜಲವಾರ್‌ ಮುಂತಾದ ಪ್ರದೇಶಗಳಲ್ಲಿ ಕಾಗೆಗಳು ಸಾಯುತ್ತಿದ್ದು, ಅದರಲ್ಲಿ ಅಪಾಯಕಾರಿ ವೈರಸ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ timesofindia.com ವರದಿ ಮಾಡಿದೆ.

ಸೆಪ್ಟೆಂಬರ್‌ 25ರಿಂದ ಕಾಗೆಗಳು ಆಕಸ್ಮಿಕವಾಗಿ ಸಾಯಲು ಆರಂಭಿಸಿದ್ದವು. ಈ ಕುರಿತು ಕೂಡಲೇ ಪಶು ಸಂಗೋಪನಾ ಇಲಾಖೆಯು ನ್ಯಾಷನಲ್‌ ಇನ್‌ ಸ್ಟಿಟ್ಯೂಟ್‌ ಆಫ್‌ ಹೈ ಸೆಕ್ಯೂರಿಟಿ ಅನಿಮಲ್‌ ಡಿಸೀಸಸ್‌ (ಎನ್‌ʼಐಎಚ್‌ಎಸ್‌ಎಡಿ) ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಹಕ್ಕಿಜ್ವರದ ಅಂಶಗಳಿರುವ ವೈರಸ್‌ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಶು ಸಂಗೋಪನಾ ಇಲಾಖೆಯ ಮುಖ್ಯ ಕಾರ್ಯದರ್ಶಿ ಕುಂಜಿಲಾಲ್‌ ಮೀನಾ, "ರಾಜ್ಯದಲ್ಲಿ ಆಕಸ್ಮಿಕವಾಗಿ ಕಾಗೆಗಳು ಸಾಯಲು ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಗಳು ಜೋಧಪುರ ಮತ್ತು ಕೋಟ ಭಾಗಗಳಲ್ಲಿ ದಾಖಲಾಗಿವೆ. ಈದರಲ್ಲಿ ಅಪಾಯಕಾರಿ ವೈರಸ್‌ ಪತ್ತೆಯಾಗಿದ್ದು, ಜಾಗ್ರತೆ ವಹಿಸುವಂತೆ ಪ್ರಾಣಿ ಸಾಕಣೆದಾರರಿಗೆ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲಾ ಪ್ರದೇಶಗಳಲ್ಲೂ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News