ಉಪಸಂಸ್ಕೃತಿಗೆ ಪ್ರತಿಸಂಸ್ಕೃತಿ ಹುಟ್ಟು ಹಾಕುವುದು ಅಗತ್ಯ: ನಾರಾಯಣ ಮಣೂರು

Update: 2021-01-03 13:58 GMT

ಉಡುಪಿ, ಜ.3: ನಾವು ಇಂದು ಬ್ರಾಹ್ಮಣರ ಸಂಸ್ಕೃತಿಯನ್ನು ಅನುಸರಿಸಿ ಕೊಂಡು ಉಪಸಂಸ್ಕೃತಿಯಲ್ಲಿ ಬದುಕುತ್ತಿದ್ದೇವೆ. ನಾವು ಉಪ ಸಂಸ್ಕೃತಿಯ ಬದಲು ಅಂಬೇಡ್ಕರ್ ಹೇಳಿದಂತೆ ಪ್ರತಿ ಸಂಸ್ಕೃತಿಯನ್ನು ಹುಟ್ಟು ಹಾಕಿಕೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ಚಿಂತಕ ನಾರಾಯಣ ಮಣೂರು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪ್ರಾಥಮಿಕ ಮಾಧ್ಯ ಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲೆ ಇದರ ವತಿಯಿಂದ ಅಕ್ಷರ ದವ್ವ ಸಾವಿತ್ರಿ ಬಾಯಿ ಪುಲೆ ಜನ್ಮದಿನಾಚರಣೆಯ ಪ್ರಯುಕ್ತ ರವಿವಾರ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ‘ಸಾವಿತ್ರಿ ಬಾಯಿ ಪುಲೆ’ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಪ್ರತಿ ಸಂಸ್ಕನತಿಯನ್ನು ಹುಟ್ಟು ಹಾಕುವ ದಾರಿಯನ್ನು ಅಂಬೇಡ್ಕರ್ ತೋರಿಸಿ ಕೊಟ್ಟಿದ್ದಾರೆ. ಆದರೆ ನಾವು ಇಂದು ಬ್ರಾಹ್ಮಣರ ರೀತಿಯಲ್ಲಿ ಬದುಕುವುದೇ ಸಂಸ್ಕೃತಿ ಎಂಬುದಾಗಿ ತಿಳಿದುಕೊಂಡಿದ್ದೇವೆ. ಜ್ಯೋತಿಬಾಯಿ ಪುಲೆ, ಸಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ್, ನಾರಾಯಣ ಗುರು, ಪೆರಿಯಾರ್‌ಗಳನ್ನು ಅರ್ಥ ಮಾಡಿಕೊಂಡು ಸಮಾಜದ ಪ್ರವಾಹದ ದಿಕ್ಕನ್ನು ಬದಲಾಯಿಸಿ ಕೊಳ್ಳು ವುದೇ ಪ್ರತಿ ಸಂಸ್ಕೃತಿಯಾಗಿದೆ ಎಂದರು.

ಮಾಡದ ತಪ್ಪಿಗೆ ನಾವು ಮತ್ತು ನಮ್ಮ ಮಕ್ಕಳು ಜೀವನ ಪೂರ್ತಿ ಸಮಾಜದಲ್ಲಿ ಅಘೋಷಿತವಾದ ನಿರ್ಬಂಧಗಳನ್ನು ಅನುಭವಿಸುತ್ತಿದ್ದೇವೆ. ಜಾತಿ ಸಂಕೀರ್ಣತೆ ಮತ್ತು ಅತ್ಯಂತ ಅಮಾನುಷವಾದ ಭಾರತ ಸಾಮಾಜಿಕ ಪದ್ಧತಿಯಲ್ಲಿ ನಾವು ಇದ್ದೇವೆ. ಆದುದರಿಂದ ಈ ನಮ್ಮ ಈ ಸಂಘಟನೆ ಅತ್ಯಂತ ವಿಶಿಷ್ಟವಾಗಿದೆ ಮತ್ತು ನಮ್ಮ ಹೋರಾಟ ಹಾಗೂ ಪ್ರಯತ್ನ ವಿಭಿನ್ನವಾಗಿದೆ ಎಂದು ಅವರು ತಿಳಿಸಿದರು.
ಸಮಾ ರಂಭವನ್ನು ಉದ್ಘಾಟಿಸಿದ ಮಣಿಪಾಲ ಸರಳೇಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಬೇಬಿ ಮಾತನಾಡಿ, ಜ್ಯೋತಿ ಬಾಯಿ ಪುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಕ್ರಾಂತಿ ಮಾಡಿ ದರು. ಶಿಕ್ಷಣ ಮತ್ತು ಜ್ಞಾನದಿಂದ ಮನುಷ್ಯ ಉನ್ನತ ಸ್ಥಿತಿ ಹೋಗಲು ಸಾಧ್ಯ ವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಬ್ರಹ್ಮಾವರ ವಲಯದ ಹಂಗಾರಕಟ್ಟೆ ಶಾಲೆಯ ಸೇಸ, ಉಡುಪಿ- ಬೆಳಪು ಶಾಲೆಯ ರಜನಿ ಕೆ., ಕುಂದಾಪುರ-ಪದ್ಮಾವತಿ ಕೆ., ಬೈಂದೂರು- ಮರವಂತೆ ಶಾಲೆಯ ಸತ್ಯಾ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಬ್ರಹ್ಮಾವರ- ಬೈಕಾಡಿ ಶಾಲೆಯ ಮಂಜುನಾಥ ನಾಯ್ಕಾ, ಉಡುಪಿ- ಕಿದಿಯೂರು ಶಾಲೆಯ ಪೂರ್ಣಿಮಾ, ಕುಂದಾಪುರ- ಸಿದ್ಧಾಪುರ ಶಾಲೆಯ ನರಸಿಂಹ ನಾಯ್ಕ, ಬೈಂದೂರು- ಕೃಷ್ಣ ಅವರಿಗೆ ‘ಸಾವಿತ್ರಿ ಬಾಯಿ ಪುಲೆ’ ಜಿಲ್ಲಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನಿವೃತ್ತ ಮುಖ್ಯೋಪಾಧ್ಯಾಯ ಸುಂದರ್ ಮಾಸ್ತರ್, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿ ಕಾರಿ ಜಿ.ಎಂ.ಮುಂದಿನಿಮನಿ, ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಉಪಪ್ರಾಂಶುಪಾ ಬಿ.ಟಿ.ನಾಯ್ಕಾ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯಲ್ಲಿ ಸಂಘದ ಬೈಂದೂರು ವಲಯ ಅಧ್ಯಕ್ಷ ವೆಂಕ ಉಪ್ಪಾರ್, ಕುಂದಾಪುರ ಅಧ್ಯಕ್ಷ ರತ್ನಾಕರ ಎಚ್., ಬ್ರಹ್ಮಾವರ ಅಧ್ಯಕ್ಷ ವರದರಾಜ್ ಬಿರ್ತಿ, ಉಡುಪಿ ಅಧ್ಯಕ್ಷ ಪ್ರಸಾದ್ ಎಸ್.ಎಸ್., ಕಾರ್ಕಳ ಅಧ್ಯಕ್ಷ ವಿಜಯ ಕುಮಾರ್ ಉಪಸ್ಥಿತರಿದ್ದರು.

ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಪಕೀರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ವೆಂಕಟ ಸ್ವಾಗತಿಸಿದರು. ಖಜಾಂಚಿ ಹೆರಿಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News