×
Ad

ಪತ್ರಕತ್ರ ಕೆ.ಜಿ.ರಮೇಶ್‌ಗೆ ಕೆ.ಟಿ.ವೇಣುಗೋಪಾಲ್ ಪ್ರಶಸ್ತಿ

Update: 2021-01-03 20:18 IST

ಮುಂಬೈ, ಜ.3: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಚೊಚ್ಚಲ ಕೆ.ಟಿ.ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಮೊಗವೀರ ಮಾಸಿಕದ ಮಾಜಿ ಸಂಪಾದ ಕ ಜಿ.ಕೆ.ರಮೇಶ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಈ ವಾರ್ಷಿಕ ಪುರಸ್ಕಾರಕ್ಕೆ ಸಂಘದ ಪ್ರಶಸ್ತಿ ಸಮಿತಿ ಕಾರ್ಯಧ್ಯಕ್ಷೆ ಡಾ.ಸುನೀತಾ ಎಂ.ಶೆಟ್ಟಿ ಮತ್ತು ಸಮಿತಿ ಸದಸ್ಯರಾದ ಸಾ.ದಯಾ ಮತ್ತು ಹರೀಶ್ ಹೆಜ್ಮಾಡಿ ಅವರು 2020ನೇ ವಾರ್ಷಿಕ ಪ್ರಶಸ್ತಿಗೆ ಮುಂಗಾರು ದೈನಿಕದ ಮುಂಬೈ ವರದಿಗಾರರಾಗಿದ್ದ ಮೊಗವೀರ ಮಾಸಿಕದ ಮಾಜಿ ಸಂಪಾದಕ ಜಿ.ಕೆ ರಮೇಶ್ ಅವರನ್ನು ಆಯ್ಕೆ ಮಾಡಿದ್ದಾರೆ. ಪ್ರಶಸ್ತಿಯು 25,000 ರೂ. ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಮುಂಬೈ ಕನ್ನಡ ಪತ್ರಿಕೋದ್ಯಮ ರಂಗದ ಅಗ್ರಗಣ್ಯ ಪತ್ರಕರ್ತರೆನಿಸಿದ್ದ ಕೆ.ಟಿ.ವೇಣುಗೋಪಾಲ್ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗು ತ್ತಿದೆ. ಶೀಘ್ರವೇ ನಡೆಯುವ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಜಿ.ಕೆ ರಮೇಶ್ ಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪತ್ರಕರ್ತರ ಸಂಘದ ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News