×
Ad

ಇಸ್ರೇಲ್ ಪಿತೂರಿಗೆ ಬಲಿಯಾಗಬೇಡಿ: ಟ್ರಂಪ್‌ಗೆ ಇರಾನ್ ಎಚ್ಚರಿಕೆ

Update: 2021-01-03 21:50 IST

ಟೆಹರಾನ್ (ಇರಾನ್), ಜ. 3: ಇರಾಕ್‌ನಲ್ಲಿರುವ ಅಮೆರಿಕ ಪಡೆಗಳ ಮೇಲೆ ದಾಳಿ ನಡೆಸುವ ಮೂಲಕ ಅವೆುರಿಕವನ್ನು ಕೆರಳಿಸುವ ಇಸ್ರೇಲ್‌ನ ಪಿತೂರಿಗೆ ಬಲಿಯಾಗಬೇಡಿ ಎಂದು ಇರಾನ್ ವಿದೇಶ ಸಚಿವ ಮುಹಮ್ಮದ್ ಜವಾದ್ ಝಾರಿಫ್ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸಿದ್ದಾರೆ.

ಕಳೆದ ವರ್ಷ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಹತರಾದ ಇರಾನ್ ಸೇನೆಯ ಉನ್ನತ ನಾಯಕ ಜನರಲ್ ಖಾಸಿಮ್ ಸುಲೈಮಾನಿಯ ಮೊದಲ ವಾರ್ಷಿಕ ಪುಣ್ಯತಿಥಿಯ ಸಂದರ್ಭದಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.

ಇರಾಕ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ಬೆಂಬಲಿತ ಬಾಡಿಗೆ ಸೈನಿಕರು ನಿರಂತರವಾಗಿ ರಾಕೆಟ್ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಅಮೆರಿಕ ಆರೋಪಿಸುತ್ತಿದೆ. ಆದರೆ, ಯಾವುದೇ ಗುಂಪುಗಳು ದಾಳಿಯ ಹೊಣೆಯನ್ನು ಹೊತ್ತಿಲ್ಲ.

‘‘ಅಮೆರಿಕದ ಮೇಲೆ ನಡೆಯುತ್ತಿರುವ ದಾಳಿಗಳನ್ನು ಇಸ್ರೇಲಿ ಏಜಂಟ್‌ಗಳು ನಡೆಸುತ್ತಿದ್ದಾರೆ ಎನ್ನುವುದನ್ನು ಇರಾಕ್‌ನ ಗುಪ್ತಚರ ಮಾಹಿತಿಗಳು ತಿಳಿಸಿವೆ. ಆದರೆ, ಈ ದಾಳಿಗಳು ಇರಾನ್ ಬೆಂಬಲದಿಂದ ನಡೆಯುತ್ತಿವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾವಿಸಿದ್ದಾರೆ’’ ಎಂದು ಝಾರಿಫ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News