ಪ್ರತ್ಯೇಕ ಪ್ರಕರಣ: ಇಬ್ಬರು ನಾಪತ್ತೆ

Update: 2021-01-03 16:32 GMT

ಅಜೆಕಾರು, ಜ.3: ಸ್ಕೂಟರ್‌ನಲ್ಲಿ ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಜ.1ರಂದು ಬೆಳಗ್ಗೆ ಹೋದ ಯೋಗೀಶ್ ಪೂಜಾರಿ(27) ಎಂಬವರು ಈವರೆಗೆ ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಇವರು ಕಪ್ಪು ಬಣ್ಣದ ಉದ್ದ ತೋಳಿನ ಚೆಕ್ಸ್ ಶರ್ಟ್, ಕ್ರೀಮ್ ಬಣ್ಣದ ಜೀನ್ಸ್ ಪ್ಯಾಂಟ್, ಖಾಕಿ ಬಣ್ಣದ ಶೂ ಧರಿಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದ ಕೋಟೇಶ್ವರ ಗ್ರಾಮದ ರಾಘವೇಂದ್ರ ಪೂಜಾರಿ(34) ಎಂಬವರು ಜ.1ರಂದು ರಾತ್ರಿ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News