‘ಉಮ್ಮಗೊರು ಅಗ’ ಯೋಜನೆಯ ಮೊದಲ ಮನೆ ಉದ್ಘಾಟನೆ

Update: 2021-01-04 14:40 GMT

ನೆಲ್ಯಾಡಿ: ‘ಉಮ್ಮಗೊರು ಅಗ’ ಯೋಜನೆಯಡಿ ನಿರ್ಮಿಸಿದ ಮೊದಲ ಮನೆಯ ಉದ್ಘಾಟನಾ ಸಮಾರಂಭವು ನೆಲ್ಯಾಡಿಯ ಕೋಲ್ಪೆಯ ಜನತಾ ಕಾಲನಿಯಲ್ಲಿ ನಡೆಯಿತು.

ನೂತನ ಮನೆಯ ಉದ್ಘಾಟನೆಯನ್ನು ನೆರವೇರಿಸಿದ ಕೋಲ್ಪೆ ಮಸೀದಿಯ ಖತೀಬ್ ಶರೀಫ್ ಐತಮಿ ಮಾತನಾಡುತ್ತಾ “ಅಸಹಾಯಕರ ಮುಖದಲ್ಲಿ ನಗುವನ್ನು ಅರಳಿಸುವುದು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ. ಇಸ್ಲಾಂ ಅದಕ್ಕೆ ಬಹಳಷ್ಠು ಮಹತ್ವ ನೀಡಿದೆ. ಇಂತಹ ಉತ್ತಮ ಕೆಲಸಗಳು ಹೆಚ್ಚೆಚ್ಚು ಆಗಬೇಕಾಗಿದೆ” ಎಂದರು. 

ಕೋಲ್ಪೆ ಮಸೀದಿಯ ಅಧ್ಯಕ್ಷ ಆದಂ ಅವರು ನೂತನ ಮನೆಯ ಕೀಯನ್ನು ಫಲಾನುಭವಿ ಫೌಝಿಯ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕೋಲ್ಪೆ ಮಸೀದಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು.ಕೆ., ಉಪಾಧ್ಯಕ್ಷ ಅಬ್ದುಲ್ ಹಮೀದ್ ಯು.ಕೆ., ಮಾಜಿ ಅಧ್ಯಕ್ಷ ಅಬೂಬಕರ್ ಕೆ.ಕೆ., ಕೋಲ್ಪೆ ಖಲಂದರ್ ಶಾ ದಫ್ ಕಮಿಟಿಯ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೆ.ಕೆ., ಟಿಆರ್‌ಎಫ್ ಸಲಹೆಗಾರ ಸುಲೈಮಾನ್ ಶೇಖ್ ಬೆಳುವಾಯಿ, ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು, ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು, ನಂಡೆ ಪೆಂಙಳ್ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ, ಉಮ್ಮಗೊರು ಅಗ ಯೋಜನೆಯ ಅಧ್ಯಕ್ಷ ಮುಸ್ತಫಾ ಅಡ್ಡೂರು ದೆಮ್ಮಲೆ, ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್, ಟಿಆರ್‌ಎಫ್ ಸದಸ್ಯರಾದ ಹುಸೈನ್ ಬಡಿಲ, ನಕಾಶ್ ಬಾಂಬಿಲ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮನೆಯ ಕಂಟ್ರಾಕ್ಟರ್ ಶರೀಫ್ ಕನ್ ಸ್ಟ್ರಷ್ಕನ್ ‌ನ ಶರೀಫ್ ಬೆಡ್ರೋಡಿ ಅವರನ್ನು ಸನ್ಮಾನಿಸಲಾಯಿತು. “ಸ್ವಂತ ಜಾಗವಿದ್ದು ಮನೆಯಿಲ್ಲದ ಅಥವಾ ಶೋಚನೀಯ ಪರಿಸ್ಥಿತಿಯಲ್ಲಿರುವ ಮನೆಗಳಲ್ಲಿರುವ ವಿಧವೆಯರು, ಅಶಕ್ತರು ಮತ್ತು ವಿಕಲಚೇತನರಿಗೆ ಆದ್ಯತೆಯ ಮೇರೆಗೆ ಸೂಕ್ತ ಪರಿಶೀಲನೆ ನಡೆಸಿ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಉಮ್ಮಗೊರು ಅಗ ತಂಡ ಹಾಕಿಕೊಂಡಿದೆ. ಇಷ್ಟರಲ್ಲೇ ಬಹಳಷ್ಟು ಅರ್ಜಿಗಳು ಬಂದಿದ್ದು, ಪರಿಶೀಲನೆ ಹಂತದಲ್ಲಿದೆ. ಸದರಿ ಅರ್ಜಿಗಳ ವಿಲೇವಾರಿ ಆದ ನಂತರ ಮುಂದೆ ಅರ್ಜಿಯನ್ನು ಕರೆಯಲಾಗುವುದು” ಎಂದು ಉಮ್ಮಗೊರು ಅಗ ಯೋಜನೆಯ ಅಧ್ಯಕ್ಷ ಮುಸ್ತಫಾ ಅಡ್ಡೂರು ದೆಮ್ಮಲೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News