×
Ad

ಕರ್ನಾಟಕ ಬ್ಯಾಂಕಿನಿಂದ ಜಿಲ್ಲಾಡಳಿತಕ್ಕೆ ಅಂಬುಲೆನ್ಸ್ ಹಸ್ತಾಂತರ

Update: 2021-01-04 21:21 IST

ಉಡುಪಿ, ಜ.4: ಜಿಲ್ಲಾಡಳಿತದ ಉಪಯೋಗಕ್ಕಾಗಿ ಕರ್ನಾಟಕ ಬ್ಯಾಂಕ್ ವತಿಯಿಂದ ಸುಮಾರು 22 ಲಕ್ಷ ರೂ. ಮೌಲ್ಯದ ಸುಸಜ್ಜಿತ ಆಂಬುಲೆನ್ಸ್ ಒಂದನ್ನು ಬ್ಯಾಂಕ್‌ನ ಮುಖ್ಯಪ್ರಬಂಧಕ ಮಂಜುನಾಥ್ ಭಟ್ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಡಿಎಚ್‌ಓ ಡಾ. ಸುದೀರ್‌ಚಂದ್ರ ಸೂಡಾ, ಡಾ.ಪ್ರಶಾಂತ್ ಭಟ್, ಡಾ.ಪ್ರೇಮಾನಂದ, ಕರ್ನಾಟಕ ಬ್ಯಾಂಕ್‌ನ ಕೇಂದ್ರ ಕಚೇರಿಯ ಮುಖ್ಯವ್ಯವಹಾರ ಅಧಿಕಾರಿ ಗೋಕುಲ್ದಾಸ್ ಪೈ, ಉಡುಪಿ ವಿಭಾಗದ ಎಜಿಎಂ ಗೋಪಾಲಕೃಷ್ಣ ಸಾಮಗ, ಶ್ರೀನಿವಾಸ್, ದೇಶ್ಪಾಂಡೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News