×
Ad

ಎಸೆಸೆಲ್ಸಿ ಪರೀಕ್ಷೆ: ಜ.8ಕ್ಕೆ ಫೋನ್ ಇನ್ ಕಾರ್ಯಕ್ರಮ

Update: 2021-01-04 21:22 IST

ಉಡುಪಿ, ಜ.4: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸೆಸೆಲ್ಸಿ ಫಲಿತಾಂಶ ವೃದ್ಧಿಗಾಗಿ ಜ.8ರಂದು ಸಂಜೆ 5 ಗಂಟೆಯಿಂದ 7ಗಂಟೆಯವರೆಗೆ ಗಣಿತ ವಿಷಯದ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ.

ಈ ಪೋನ್-ಇನ್ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳು, ಅವರ ಪಾಲಕರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್. ಎಚ್.ನಾಗೂರ ಮೊಬೈಲ್ ನಂ.: 9448999353 ಮತ್ತು ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಭಟ್ ಎಂ. ಮೊ: 8277614690, ಹರೀಶ್ ಶೆಟ್ಟಿ ಮೊ:9902933532, ದಿನೇಶ್ ಶೆಟ್ಟಿಗಾರ್ ಮೊ: 9449045697, ಆರ್.ನಾರಾಯಣ ಶೆಣೈ ಮೊ:9980898232, ಯೋಗೀಂದ್ರ ನಾಯಕ್ ಮೊ: 9900987331, ರಾಜೇಂದ್ರ ಭಟ್ ಮೊ:9880773581ಇವರಿಗೆ ಕರೆಮಾಡಿ ತಮ್ಮ ಪ್ರಶ್ನೆಗಳನ್ನು, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ಫೋನ್-ಇನ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News