×
Ad

ರೆಡ್‌ಕ್ರಾಸ್‌ನಿಂದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

Update: 2021-01-04 21:34 IST

ಉಡುಪಿ, ಜ.4: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕವು ನಿಡಂಬೂರು ಯುವಕ ಮಂಡಲದ ಸಹಯೋಗದೊಂದಿಗೆ ಗುರುತಿಸಲಾದ ಆಯ್ದ ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಪರಿಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಶನಿವಾರ ವಿತರಿಸಿತು.

ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಡಾ.ತಲ್ಲೂರು ಶಿವರಾಮ ಶೆಟ್ಟಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಮಾನವೀಯ ಸೇವೆಯನ್ನು ಮಾಡುವ ಸಂಸ್ಥೆಯಾಗಿದ್ದು, ಇದು ಸಮಾಜದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿ, ನೊಂದವರ, ದೀನದಲಿತರ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟು, ಸೇವೆ ಮಾಡುತ್ತಾ ಬಂದಿದೆ ಎಂದರು.

ರೆಡ್‌ಕ್ರಾಸ್ ಆಡಳಿತ ಮಂಡಳಿ ಸದಸ್ಯ ಹಾಗೂ ಡಿಡಿಆರ್‌ಸಿ ಸದಸ್ಯ ಕಾರ್ಯದರ್ಶಿ ಕೆ.ಸನ್ಮತ್ ಹೆಗ್ಡೆ, ಡಿಡಿಆರ್‌ಸಿಯಿಂದ ವಿಕಲಚೇತನ ಫಲಾನುವಿ ಗಳಿಗೆ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ. ಅಶೋಕ್‌ಕುಮಾರ್ ವೈ.ಜಿ., ಗೌರವ ಕಾರ್ಯದರ್ಶಿ ಕೆ.ಜಯರಾಮ ಆಚಾರ್ಯ ಸಾಲಿಗ್ರಾಮ, ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕುಮಾರ್, ಗೌರವ ಅಧ್ಯಕ್ಷ ಶೇಖರ್ ಅಂಚನ್, ನಿಡಂಬೂರು ಯುವಕ ಮಂಡಲ ಟ್ರಸ್ಟ್‌ನ ನ್ಯಾಯವಾದಿ ಶ್ರೀನಿವಾಸ ಹೆಗ್ಡೆ, ಮತ್ತಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಡೆಕಾರ್ ಮತ್ತು ಕುತ್ಪಾಡಿ ಪರಿಸರದ 40 ಮಂದಿ ಫಲಾನುಭವಿಗಳಿಗೆ ಕಿಚನ್ ಸೆಟ್ಸ್, ಹೊದಿಕೆ, ಮಾಸ್ಕ್, ಸೋಪುಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News