×
Ad

ಪಕ್ಷಿಕೆರೆ: ಮಜ್ಲಿಸುನ್ನೂರ್, ಗ್ರಾ.ಪಂ ನೂತನ ಸದಸ್ಯಗೆ ಸನ್ಮಾನ

Update: 2021-01-04 21:42 IST

ಮಂಗಳೂರು, ಜ.4: ಮುಹಿಯುದ್ದೀನ್ ಬೊಳ್ಳೂರು ಜುಮಾ ಮಸೀದಿಯ ಅಧೀನದಲ್ಲಿರುವ ಪಕ್ಷಿಕೆರೆ ಹೊಸಕಾಡು ದಾರುಲ್ ಉಲೂಮ್ ಮದರಸದಲ್ಲಿ ಮಜ್ಲಿಸುನ್ನೂರ್ ಹಾಗೂ ಗ್ರಾಮ ಪಂಚಾಯತ್‌ನ ಸ್ಥಳೀಯ ನೂತನ ಸದಸ್ಯ ಮಯ್ಯದ್ದಿ ಅವರಿಗೆ ಸನ್ಮಾನ ಕಾರ್ಯಕ್ರಮ ಮದರಸದ ವಠಾರದಲ್ಲಿ ರವಿವಾರ ರಾತ್ರಿ ನಡೆಯಿತು.

ಮಜ್ಲಿಸುನ್ನೂರ್‌ನ ನೇತೃತ್ವವನ್ನು ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಝ್‌ಹರ್ ಫೈಝಿ ಬೊಳ್ಳೂರು ಉಸ್ತಾದ್ ವಹಿಸಿದ್ದರು.

ಇದೇ ಸಂದರ್ಭ ಹೊಸಕಾಡು ಪ್ರದೇಶದ ಗ್ರಾಮ ಪಂಚಾಯತ್ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಮಯ್ಯದ್ದಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಬೊಳ್ಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಶಂಶುದ್ದೀನ್ ಕಟ್ಟೆಪುಣಿ, ಮಾಜಿ ಅಧ್ಯಕ್ಷ ಎ.ಕೆ. ಜೀಲಾನಿ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ದಾರುಲ್ ಉಲೂಮ್ ಮದರಸ ಸಮಿತಿಯ ಅಧ್ಯಕ್ಷ ಶಂಶುದ್ದೀನ್ ಹೊಸಕಾಡು, ಸಿರಾಜುದ್ದೀನ್ ಫೈಝಿ ಚಾರ್ಮಾಡಿ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News