ಬಂದರ್ ಜುಮಾ ಮಸೀದಿಯ 3ನೇ ನೂತನ ಅಡ್ಡ ರಸ್ತೆಯ ಉದ್ಘಾಟನೆ
Update: 2021-01-04 22:14 IST
ಮಂಗಳೂರು, ಜ.4: ನಗರದ ಬಂದರ್ 44ನೇ ವಾರ್ಡಿನ ಜುಮಾ ಮಸೀದಿಯ 3ನೇ ಕಾಂಕ್ರಿಟ್ ಅಡ್ಡ ರಸ್ತೆಯ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ನಡೆಯಿತು.
ಬಂದರ್ ಬ್ರದರ್ಸ್ ವತಿಯಿಂದ ಉದ್ಘಾಟನಾ ಕಾರ್ಯಕ್ರಮವು ಸೋಮವಾರ ಬೆಳಗ್ಗೆ ನಡೆಯಿತು.
ಸ್ಥಳೀಯ ಕಾರ್ಪೊರೇಟರ್ ಝೀನತ್ ಶಂಶುದ್ದೀನ್ ನೂತನ ರಸ್ತೆಯನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಕಾಂಗ್ರೆಸ್ ಮುಖಂಢ ಶಂಸುದ್ದೀನ್, ಮಾಜಿ ಕಾರ್ಪೊರೇಟರ್ ರಮೀಝಾ ನಾಸಿರ್, ದ.ಕ.ಜಿಲ್ಲಾ ಪುಟ್ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಿಎಂ ಅಸ್ಲಂ, ಎಸ್‌ಡಿಪಿಐ ಬಂದರ್ ವಾರ್ಡ್ ಅಧ್ಯಕ್ಷ ರಿಝ್ವಾನ್ ಅಹ್ಮದ್, ಉದ್ಯಮಿ ಜಮೀರ್, ನಾಸಿರ್ ಯಾದ್ಗಾರ್, ಸ್ಥಳೀಯರಾದ ಕೆಎಂ ಹನೀಫ್, ಇಸಾಕ್ ಮೂಪ, ಬಶೀರ್, ಶೌಕತ್ ಹಾಗೂ ಬಂದರ್ ಬ್ರದರ್ಸ್‌ನ ಮುಖಂಡು ಪಾಲ್ಗೊಂಡಿದ್ದರು.