ಜ.8ರಿಂದ ಕನ್ನಡ ಪ್ರವೇಶ, ಕಾವ ಜಾಣ, ರತ್ನ ಪರೀಕ್ಷೆ
ಮಂಗಳೂರು, ಜ.4: ಕನ್ನಡ ಸಾಹಿತ್ಯ ಪರಿಷತ್‌ನ 2020-21ನೇ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಜ. 8,9,10ರಂದು ನಡೆಯಲಿದೆ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
ಜ.8ರಂದು ಬೆಳಗ್ಗೆ 10ರಿಂದ 1ರ ತನಕ ‘ಕನ್ನಡ ರತ್ನ’ ಪತ್ರಿಕೆ 1 ಹಾಗೂ ‘ಕನ್ನಡ ಜಾಣ’ ಪತ್ರಿಕೆ-1, ಮಧ್ಯಾಹ್ನ 2ರಿಂದ 5, ’ಕನ್ನಡ ರತ್ನ’ ಪತ್ರಿಕೆ-2 ಹಾಗೂ ’ಕನ್ನಡ ಜಾಣ’ ಪತ್ರಿಕೆ 2 ನಡೆಯಲಿದೆ.
ಜ.9ರಂದು ಬೆಳಗ್ಗೆ 10ರಿಂದ 1ರ ತನಕ ‘ಕನ್ನಡ ಕಾವ’ ಪತ್ರಿಕೆ-1, ‘ಕನ್ನಡ ಜಾಣ’-ಪತ್ರಿಕೆ 3, ‘ಕನ್ನಡ ರತ್ನ’ ಪತ್ರಿಕೆ 3 ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ‘ಕನ್ನಡ ಕಾವ’ ಪತ್ರಿಕೆ-2. ‘ಕನ್ನಡ ಜಾಣ’ ಪತ್ರಿಕೆ-4. ‘ಕನ್ನಡ ರತ್ನ’ ಪತ್ರಿಕೆ 4 ನಡೆಯಲಿದೆ.
ಜ.10ರಂದು ಬೆಳಗ್ಗೆ 10ರಿಂದ 1, ‘ಕನ್ನಡ ಪ್ರವೇಶ’ ಪತ್ರಿಕೆ 1, ‘ಕನ್ನಡ ರತ್ನ’ ಪತ್ರಿಕೆ-5 ಹಾಗೂ ಕನ್ನಡ ಕಾವ, ಕನ್ನಡ ಜಾಣದ ಮೌಖಿಕ ಪರೀಕ್ಷೆ. ಮಧ್ಯಾಹ್ನ 2 ರಿಂದ 5 ‘ಕನ್ನಡ ಪ್ರವೇಶ’ ಪತ್ರಿಕೆ 2 ಹಾಗೂ ’ಕನ್ನಡ ಕಾವ’ ಮೌಖಿಕ ಪರೀಕ್ಷೆ (ಮುಂದುವರಿಕೆ) ನಡೆಯಲಿವೆ.