ಜ. 7: ಅಖಿಲ ಭಾರತ ಬ್ಯಾರಿ ಪರಿಷತ್ ವಾರ್ಷಿಕ ಮಹಾಸಭೆ
Update: 2021-01-04 22:19 IST
ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ ಇದರ ವಾರ್ಷಿಕ ಮಹಾಸಭೆಯು ಜ.7ರ ಅಪರಾಹ್ನ 3ಕ್ಕೆ ಮಂಗಳೂರಿನ ಕಂಕನಾಡಿ ಜಮಿಯತುಲ್ ಫಲಾಹ್ ಸಭಾಂಗಣದಲ್ಲಿ ಜರುಗಲಿದೆ.
ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ಭಾಗವಹಿಸುವವರು ಜ.5 ರೊಳಗಾಗಿ ಸದಸ್ಯತ್ವ ಶುಲ್ಕ ನೀಡಬೇಕಾಗಿಯೂ, ಸದಸ್ಯರೆಲ್ಲರೂ ಮಹಾಸಭೆಗೆ ತಪ್ಪದೆ ಭಾಗವಹಿಸಬೇಕಾಗಿಯೂ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್ ಅಬೂಬಕ್ಕರ್ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ, ಹೆಚ್ಚಿನ ವಿವರಗಳಿಗೆ 9036033747ನ್ನು ಸಂಪರ್ಕಿಸಲು ಕೋರಲಾಗಿದೆ.